ಬೆಂಗಳೂರು: ‘ನ್ಯಾಷನಲ್ ಕಾಲೇಜು, ಎಂ.ಜಿ.ರಸ್ತೆ, ಬೈಯಪ್ಪನಹಳ್ಳಿ ಹಾಗೂ ವಿಜಯನಗರ ಮೆಟ್ರೊ ನಿಲ್ದಾಣಗಳಲ್ಲಿ ಎರಡು ದಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ನಿಲ್ದಾಣದಲ್ಲಿ 6 ಕೇಂದ್ರಗಳನ್ನು ತೆರೆಯ ಲಾಗಿದೆ.ಒಂದೊಂದು ನಿಲ್ದಾಣದಲ್ಲಿ ದಿನಕ್ಕೆ 900ರಂತೆ ಮೊದಲ ಹಂತದಲ್ಲಿ 7,500 ಮೆಟ್ರೊ ನಿರ್ಮಾಣ ಕಾರ್ಮಿ ಕರಿಗೆ ಲಸಿಕೆ ಹಾಕುವ ಗುರಿ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಎ.ಸಿ.ಟಿ. ಗ್ರಾಂಟ್ಸ್, ದಿ ಯುನೈ ಟೆಡ್ ಬೆಂಗಳೂರು ಹಾಗೂ ಸತ್ವ ಕನ್ಸಲ್ಟಿಂಗ್ ಸಹಭಾಗಿತ್ವದಲ್ಲಿ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೆಟ್ರೊ ನಿರ್ಮಾಣ ಕಾರ್ಮಿಕರಿಗೆ ಲಸಿಕೆ ಉಚಿತವಾಗಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹಲವಾರು ಕಂಪನಿ ಗಳುಕಾರ್ಪೊರೇಟ್ ಸಾಮಾಜಿಕ ಹೊಣೆ ಗಾರಿಕೆ (ಸಿಎಸ್ಆರ್) ಕಾರ್ಯಕ್ರಮದ ಅಡಿಯಲ್ಲಿ ಹಣ, ಅತ್ಯಾಧುನಿಕ
ಉಪಕರಣಗಳನ್ನು ಒದಗಿಸಿವೆ’ ಎಂದರು.

ಕೊಳೆಗೇರಿಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚು: ವಿಲ್ಸನ್ ಗಾರ್ಡನ್ನ ರೆಡ್ ಫೀಲ್ಡ್ ಮೈದಾನ ದಲ್ಲಿ ಹಮ್ಮಿಕೊಂಡಿದ್ದ ಕೊಳೆಗೇರಿ ನಿವಾಸಿ ಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಲ್ಲಿ ಭಾಗಿಯಾಗಿ ‘ಕೊಳೆಗೇರಿಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ. ಇದನ್ನು ಮನಗಂಡುಎಸಿಟಿ ಗ್ರಾಂಟ್ಸ್, ಅಮೆಜಾನ್ ಇಂಡಿಯಾ, ಜೊಮ್ಯಾಟೊ, ಪೇಟಿಎಂ, ಸತ್ವ ಕನ್ಸಲ್ಟಿಂಗ್ ಸೇರಿದಂತೆ ಹಲವು ಕಂಪನಿಗಳು ಸಿಎಸ್ಆರ್ ನಿಧಿ ಮೂಲಕ ಇಲ್ಲಿನ ನಿವಾಸಿಗಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿವೆ. ಕೋವಿಡ್ ನಿಯಂತ್ರಣದ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆ’ ಎಂದರು.

‘ಬ್ಯಾಂಕ್ಗಳಿಂದ ಸುಲಭವಾಗಿ ಸಾಲ ಒದಗಿಸಲು ಕ್ರಮ’
‘ಗುರುತಿನ ಚೀಟಿ ಹೊಂದಿರದ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದಲೇ ಆನ್ಲೈನ್ ಮೂಲಕ ಶಿಫಾರಸು ಪತ್ರ (ಎಲ್ಒಆರ್) ನೀಡಿ ಬ್ಯಾಂಕ್ಗಳಿಂದ ಸುಲಭವಾಗಿ ಸಾಲ ಒದಗಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಯಡಿಯೂರಪ್ಪ ಹೇಳಿದರು.

ಬಿಬಿಎಂಪಿ ವತಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಬೀದಿಬದಿ ವ್ಯಾಪಾರಿಗಳಿಗೆಲಸಿಕೆ ನೀಡಲಾಗುತ್ತಿದ್ದು ಇಲ್ಲಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

‘4 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್ಗಳಿಂದ ತಲಾ₹10 ಸಾವಿರ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ.53 ಸಾವಿರ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಲಸಿಕೆ ಉಚಿತವಾಗಿ ನೀಡಲು ಮುಂದಾಗಿದ್ದೇವೆ’ ಎಂದರು.

‘ತುರ್ತು ಚಿಕಿತ್ಸಾ ವ್ಯವಸ್ಥೆ ಹೆಚ್ಚಳ’
‘ನಗರದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿವೆ. ಹಾಗೆಂದು ನಾವು ಮೈಮರೆಯಬಾರದು. ತುರ್ತು ಚಿಕಿತ್ಸಾ ವ್ಯವಸ್ಥೆ ಹೆಚ್ಚಿಸುವ ಮೂಲಕ ಜನರಲ್ಲಿ ಸುರಕ್ಷತೆಯ ಭಾವ ಮೂಡಿಸಲಾಗುವುದು’ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಜಯನಗರ 4ನೇ ಬ್ಲಾಕ್ ನಲ್ಲಿರುವ ಗಾರ್ಡನ್ ಸಿಟಿ ಆಸ್ಪತ್ರೆಯನ್ನು ಪುನರುಜ್ಜೀವನ ಗೊಳಿಸಲಾಗಿದ್ದು, ಇಲ್ಲಿ ಕೋವಿಡ್ ಪೀಡಿತರ ಚಿಕಿತ್ಸೆಗೆ 70 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಆಸ್ಪತ್ರೆಯಲ್ಲಿ ಆಶೀರ್ವಾದ ಪೈಪ್ಸ್ ವತಿ ಯಿಂದ10 ಐಸಿಯು ಹಾಸಿಗೆ, ಅಜೀಂ ಪ್ರೇಮ್ಜೀ ಫೌಂಡೇಷನ್ ಹಾಗೂ ಡಾಕ್ಟರ್ಸ್ ಫಾರ್ ಯೂ ಸಂಸ್ಥೆಗಳ ಸಹಕಾರದೊಂದಿಗೆ10 ಎಚ್ಜಿಯು ಹಾಗೂ ಆಮ್ಲಜನಕ ಸೌಲಭ್ಯದ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಜಯನಗರ ಜನರಲ್ ಆಸ್ಪತ್ರೆಯ ವಿಸ್ತರಣಾ ಘಟಕವಾಗಿ ಈ ಆಸ್ಪತ್ರೆ ಕೆಲಸ ಮಾಡಲಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.