ಬೆಂಗಳೂರು: ಮನೆಯೊಂದರಲ್ಲಿ ಕಾನೂನು ಬಾಹಿರವಾಗಿ ವಿಡಿಯೊ ಗೇಮ್ ಜೂಜಾಟ ನಡೆಸುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ಕಮ್ಮನಹಳ್ಳಿಯ ಮಲ್ಲಿನಾಥ (32), ಫ್ರೇಜರ್ ಟೌನ್ನ ಶೇಜ ಖಾನ್ (47), ಯಶವಂತಪುರದ ಸಿ.ಮಧು (49) ಹಾಗೂ ವಿಲ್ಸನ್ ಗಾರ್ಡನ್ನ ಜಬಿ (41) ಬಂಧಿತರು.

ಆರೋಪಿಗಳು ಜೂಜಾಟಕ್ಕೆ ಬಳಸುತ್ತಿದ್ದ 13 ಕಂಪ್ಯೂಟರ್ ಮಾನಿಟರ್ಗಳು ಹಾಗೂ ₹1,500 ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಜೆ.ಸಿ.ನಗರದ ಮಾರಪ್ಪ ಗಾರ್ಡನ್ನ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ಆರೋಪಿಗಳು ಕಂಪ್ಯೂಟರ್ ಸರ್ವೀಸ್ ಸೆಂಟರ್ ನಡೆಸುವುದಾಗಿ ಮನೆಯನ್ನು ಬಾಡಿಗೆ ಪಡೆದಿದ್ದರು’.

‘ಕಾನೂನು ಬಾಹಿರವಾಗಿ 20 ದಿನಗಳಿಂದ ವಿಡಿಯೊ ಗೇಮ್ ಜೂಜಾಟ ನಡೆಸುತ್ತಿದ್ದರು. ಈ ಸಂಬಂಧ ಪೊಲೀಸರಿಗೆ ಬಂದಿದ್ದ ದೂರಿನ ಅನ್ವಯಮನೆಯ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಮೂವರು ಆರೋಪಿಗಳು ಸಿಕ್ಕಿಬಿದ್ದರು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.