ಬೆಂಗಳೂರು: ಹೆಸರಘಟ್ಟ ಕೆರೆ ದಡದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಮೃತರನ್ನು ನಾಗರಾಜ್ ಎಂದು ಗುರುತಿಸಲಾಗಿದೆ. ಅವರು ಕಾಣೆಯಾದ ಬಗ್ಗೆ ದೊಡ್ಡಬಳ್ಳಾಪುರ ಠಾಣೆಯಲ್ಲಿ ಇತ್ತೀಚೆಗಷ್ಟೇ ದೂರು ದಾಖಲಾಗಿತ್ತು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಸೋಲದೇವನಳ್ಳಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಖಾಸ್ಬಾಗ್ನ ಮೃತ ನಾಗರಾಜ್ ಅವರ ಕುಟುಂಬದ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಕೊರೊನಾ ಇರಬಹುದೆಂದು ಸ್ಥಳೀಯರು ಅನುಮಾನಿಸಿ ಮಾತನಾಡಲಾರಂಭಿಸಿದ್ದರು. ಕೆಲವರ ಗಂಟಲಿನ ದ್ರವದ ವರದಿ ಪಾಸಿಟಿವ್ ಬಂದಿತ್ತು. ಅವರ ಜೊತೆ ಒಡನಾಟವಿಟ್ಟುಕೊಂಡಿದ್ದ ಎಂಬ ಕಾರಣಕ್ಕೆ ನಾಗರಾಜ್ ಅವರನ್ನು ಹಲವರು ಹೀಯಾಳಿಸುತ್ತಿದ್ದರು. ಅದರಿಂದ ನಾಗರಾಜ್ ನೊಂದಿದ್ದರು ಎನ್ನಲಾಗಿದೆ. ಅದರಿಂದಾಗಿ ಅವರು ಮನೆ ಬಿಟ್ಟು ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.