ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ದಿನಗೂಲಿ ಸೇವೆಯಿಂದ ಸಕ್ರಮ ಗೊಂಡು ‘ಸೂಪರ್ ನ್ಯೂಮರರಿ’ ಹುದ್ದೆ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರ ಸೇವೆಯನ್ನು ಮಂಜೂರಾದ ಹುದ್ದೆಗಳ ಜತೆಗೆ ತ್ವರಿತವಾಗಿ ಮರು ವಿನ್ಯಾಸ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

1984ರ ಜುಲೈ 1 ಮತ್ತು ಅದಕ್ಕೂ ಮೊದಲು ನೇಮಕಾತಿ ಹೊಂದಿದ್ದ ದಿನಗೂಲಿ ನೌಕರರ ಸೇವೆಯನ್ನು ಕಾಯಂಗೊಳಿಸಲು 1999ರ ಆಗಸ್ಟ್ 6 ರಂದು ಆದೇಶ ಹೊರಡಿಸಲಾಗಿತ್ತು. ಸೇವೆಯನ್ನು ಕಾಯಂಗೊಳಿಸುವ ಸಂದರ್ಭದಲ್ಲಿ ಅಗತ್ಯ ಸಂಖ್ಯೆಯ ಖಾಲಿ ಹುದ್ದೆಗಳು ಲಭ್ಯವಿರದಿದ್ದರೆ, ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನಂತರದಲ್ಲಿ ಈ ಹುದ್ದೆ ಗಳನ್ನು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಮಂಜೂರಾದ ಹುದ್ದೆಗಳ ಜತೆಗೆ ಮರುವಿನ್ಯಾಸ ಮಾಡಲು 2028 ರವರೆಗೂ ಹಲವು ಆದೇಶ ಹೊರಡಿಸಲಾಗಿತ್ತು.

ಮರು ವಿನ್ಯಾಸ ಮಾಡುವವರೆಗೂ ಈ ನೌಕರರಿಗೆ ಕಾಲಬದ್ಧ ಬಡ್ತಿ ಮತ್ತು ವೇತನ ನೀಡುವಂತಿಲ್ಲ ಎಂಬ ಷರತ್ತುಗಳನ್ನು 2018ರಲ್ಲಿ ಹಾಕಲಾಗಿತ್ತು. ಈ ಸೂಚನೆಯನ್ನೂ ಹಿಂತೆಗೆದುಕೊಂಡು ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.