ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾದಕ ವಸ್ತು ಮಾರಾಟ | ಒಂದೇ ತಿಂಗಳಲ್ಲಿ 36 ಪ್ರಕರಣ, 42 ಮಂದಿ ವಶಕ್ಕೆ

Published : 10 ಸೆಪ್ಟೆಂಬರ್ 2024, 21:30 IST
Last Updated : 10 ಸೆಪ್ಟೆಂಬರ್ 2024, 21:30 IST
ಫಾಲೋ ಮಾಡಿ
Comments

ಬೆಂಗಳೂರು: ಮಾದಕ ವಸ್ತು ಮಾರಾಟ ದಂದೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪೊಲೀಸರು, ಆಗಸ್ಟ್ ತಿಂಗಳಲ್ಲಿ ನಡೆಸಿ ಕಾರ್ಯಾಚರಣೆಯಲ್ಲಿ 36 ಪ್ರಕರಣ ದಾಖಲಿಸಿಕೊಂಡು, ಭಾರೀ ಪ್ರಮಾಣದ ಹೆರಾಯಿನ್, ಗಾಂಜಾ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಇಬ್ಬರು ವಿದೇಶಿ ಪ್ರಜೆಗಳು ಸೇರಿ 42 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಿಂದ 37 ಕೆ.ಜಿ ಗಾಂಜಾ, 600 ಗ್ರಾಂ ಅಫೀಮು, 84 ಗ್ರಾಂ ಹೆರಾಯಿನ್, 324 ಎಂಡಿಎಂಎ, 100 ಟೈಡಲ್ ಮಾತ್ರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಜೂಜು ಕೇಂದ್ರಗಳ ಮೇಲೂ ದಾಳಿ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ 353 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ತಿಳಿಸಿದರು.

ಈ ಪೈಕಿ 2 ಮಟ್ಕಾ ದಂಧೆ ಪ್ರಕರಣ, 17 ಜೂಜು ಪ್ರಕರಣ, 2 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ, 13 ಇತರ ಬೆಟ್ಟಿಂಗ್ ಪ್ರಕರಣ, 9 ಅಬಕಾರಿ ಪ್ರಕರಣ, ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ 6 ಪ್ರಕರಣಗಳು, ಶಸ್ತ್ರಾಸ್ತ್ರ ತಡೆ ಕಾಯ್ದೆ ಅಡಿಯಲ್ಲಿ 7, ಕಾಪಿರೈಟ್ ಕಾಯ್ದೆ ಅಡಿ 15 ಸೇರಿದಂತೆ ಒಟ್ಟು 211 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT