ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಐ.ಟಿ–ಬಿ.ಟಿ ಉದ್ಯೋಗಿಗಳಿಗೆ ಗಾಂಜಾ ಪೂರೈಸುತ್ತಿದ್ದ ವಿದೇಶಿ ಪೆಡ್ಲರ್ ಸೇರಿ ಮೂವರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ₹86.50 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿದೇಶಿ ಪೆಡ್ಲರ್ ಬಂಧನ: ಐ.ಟಿ–ಬಿ.ಟಿ ಉದ್ಯೋಗಿಗಳಿಗೆ ಎಂಡಿಎಂಎ ಪೂರೈಸುತ್ತಿದ್ದ ನೈಜೀರಿಯಾ ದೇಶದ ಪ್ರಜೆ ಕೌಸಾಸಿ ಜೂಲ್ಸ್ (36) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ₹77 ಲಕ್ಷ ಮೌಲ್ಯದ 515 ಗ್ರಾಂ. ಎಂಡಿಎಂಎ ಕ್ರಿಸ್ಟಲ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

2017ರಲ್ಲಿ ವ್ಯಾವಹಾರಿಕ ವೀಸಾ ಪಡೆದು ಆರೋಪಿ ಭಾರತಕ್ಕೆ ಬಂದಿದ್ದ. ಮುಂಬೈ, ದೆಹಲಿಯಲ್ಲಿ ವಾಸವಿದ್ದು, ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಸೋಲದೇವನಹಳ್ಳಿಯಲ್ಲಿ ನೆಲಸಿದ್ದ. ವಿದ್ಯಾರ್ಥಿಗಳು, ಐ.ಟಿ- ಬಿ.ಟಿ ಉದ್ಯೋಗಿಗಳಿಗೆ ಪ್ರತಿ ಗ್ರಾಂ.ಗೆ ₹ 12ರಿಂದ ₹15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಇನ್ನೊಂದು ಪ್ರಕರಣದಲ್ಲಿ ಗಾಂಜಾ ಮಾರುತ್ತಿದ್ದ ಪಶ್ಚಿಮ ಬಂಗಾಳದ ಅಬ್ದುಲ್ ಬಷಹರ್ನನ್ನು (34) ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ₹7.5 ಲಕ್ಷ ಮೌಲ್ಯದ 10 ಕೆ.ಜಿ 370 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

‘ಆರೋಪಿ ನಾಲ್ಕೈದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಈಚೆಗೆ ಕರಿಯಮ್ಮನ ಅಗ್ರಹಾರ ಮಂತ್ರಿ ಎಸ್ಪಾನಾ ಅಪಾರ್ಟ್ಮೆಂಟ್ ಹಿಂಭಾಗದ ಕಾರ್ಮಿಕರ ಶೆಡ್ ಬಳಿ ನಜೀರ್ ಎಂಬಾತನ ಕಚೇರಿಯಲ್ಲಿ ಗಾಂಜಾ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಆಗ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಖಾಸಗಿ ಕಂಪನಿ ಉದ್ಯೋಗಿ ಬಂಧನ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಅಡಿ ಖಾಸಗಿ ಕಂಪನಿ ಉದ್ಯೋಗಿ, ಮೂಲತಃ ಪಶ್ಚಿಮ ಬಂಗಾಳದ ಮಲೈಕುಜರ್ (34) ಎಂಬಾತನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ₹ 2 ಲಕ್ಷ ಮೌಲ್ಯದ 4 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ರೈಲಿನ ಮೂಲಕ ಗಾಂಜಾ ತಂದು ನಗರದಲ್ಲಿ ಗ್ರಾಹಕರಿಗೆ ಪೂರೈಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.