ದಿನ ಭವಿಷ್ಯ: ಈ ರಾಶಿಯ ಹೆಣ್ಮಕ್ಕಳಿಗೆ ವಾಹನ ಅಥವಾ ವಸ್ತ್ರಾಭರಣ ಪ್ರಾಪ್ತಿಯಾಗವುದು
Published 25 ನವೆಂಬರ್ 2024, 23:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೂವಿನ ಬೆಳೆಗಾರರಿಗೆ ವಾತಾವರಣದಲ್ಲಿನ ಬದಲಾವಣೆಯಿಂದ ಸಣ್ಣಪುಟ್ಟ ತೊಂದರೆಗಳು ಸಂಭವಿಸಬಹುದು. ಶುಭ ಕಾರ್ಯಗಳ ಚಿಂತನೆಗೆ ಇಂದು ಸಕಾಲ. ಶೀತ ಬಾಧೆ ಉಂಟಾಗುವುದು.
ವೃಷಭ
ಹೊಸ ರೀತಿಯ ಚಿಂತನೆಗಳು ಫಲಕಾರಿಯಾಗಲು ಸಮಯ ಹಿಡಿದರೂ ಫಲ ನಿಶ್ಚಿತ ಎಂಬುದು ಮನದಟ್ಟಾಗಿದೆ. ಕೈಮಗ್ಗ ವಸ್ತ್ರದ ರಫ್ತು ಮಾರಾಟಗಾರರಿಗೆ ಲಾಭ . ಚರ್ಮ ರೋಗಗಳು ಎದುರಾಗಬಹುದು.
ಮಿಥುನ
ಬ್ಯಾಂಕಿಂಗ್ ಉದ್ಯೋಗಸ್ಥರಿಗೆ ವರ್ಗಾವಣೆಯಿಂದ ದೂರದೂರಿನಲ್ಲಿ ಅಥವಾ ಕುಟುಂಬ ಸದಸ್ಯರಿಂದ ದೂರ ವಾಸಿಸುವ ಸಂದರ್ಭ ಬರಲಿದೆ. ವಾಣಿಜ್ಯ ಬೆಳೆಗಳ ಮಾರಾಟಗಳಿಂದ ಅಧಿಕ ಲಾಭ.
ಕರ್ಕಾಟಕ
ಅಕ್ಕಪಕ್ಕದಲ್ಲಿನ ಭಿನ್ನಾಭಿಪ್ರಾಯಗಳಿಗೆ ಹೆಚ್ಚು ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಹವಾ ಬದಲಾವಣೆಗೆ ಕಿರುಪ್ರವಾಸ ಕೈಗೊಳ್ಳುವ ಮನಸ್ಸಾಗಲಿದೆ. ಉದ್ಯೋಗದಲ್ಲಿ ಎದುರಾಗಿದ್ದ ಚಿಂತೆ ದೂರಾಗುವುದು.
ಸಿಂಹ
ಎಂಥ ಅನಿವಾರ್ಯ ಪರಿಸ್ಥಿತಿಗೂ ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ ವಿಚಾರ. ಆಲಸ್ಯ ಮನೋಭಾವವು ಹೆಚ್ಚಾಗಿ ಉತ್ಸಾಹ ಕಳೆದುಕೊಳ್ಳುವಂತೆ ಆಗಬಹುದು.
ಕನ್ಯಾ
ಕುಟುಂಬದ ಗಣ್ಯರಿಂದ ಬದುಕಿನ ದಾರಿಯ ಬಗ್ಗೆ ಮಾರ್ಗದರ್ಶನ ಸಿಗಲಿದೆ. ಸಮಸ್ಯೆಯನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಗಮನ ನೀಡಿ. ಮೆಕ್ಯಾನಿಕ್ ಕೆಲಸಗಾರರಿಗೆ ಅಧಿಕ ವರಮಾನ ಸಿಗಲಿದೆ.
ತುಲಾ
ಒಡಹುಟ್ಟಿದವರ ಮಾತುಗಳು ಅಥವಾ ಅವರ ಹಾವಭಾವವು ಮನಸ್ಸನ್ನು ಹಾಳುಮಾಡಬಹುದು. ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ಆದಾಯ ಪ್ರಾಪ್ತಿ.
ವೃಶ್ಚಿಕ
ಸಂಶೋಧನಾ ವಿದ್ಯಾರ್ಥಿಗಳಿಗೆ ಗುಪ್ತವಾದ ಮಾಹಿತಿಯು ತಿಳಿದು ಅಧ್ಯಯನಕ್ಕೆ ಉಪಯೋಗವಾಗಲಿದೆ. ಚಿನ್ನ ,ಬೆಳ್ಳಿ ವ್ಯಾಪಾರಸ್ಥರಿಗೆ ಉತ್ತಮ ಆದಾಯವಿರುವುದು. ದುಃಖಗಳ ತೀವ್ರತೆಯು ಕಡಿಮೆಯಾಗುವುದು.
ಧನು
ಆಹಾರ ಪದಾರ್ಥದ ವ್ಯಾಪಾರ ಮಾಡುವವರು ಶುದ್ಧತೆಯ ಬಗ್ಗೆ ಗಮನ ನೀಡಿದರೆ ಒಳ್ಳೆಯದು. ಕಂದಾಯ ಅಧಿಕಾರಿಗಳಿಗೆ ಅಲೆದಾಟ ಹೆಚ್ಚುವುದು. ಯೋಗಾಭ್ಯಾಸ, ಧ್ಯಾನದಿಂದ ಆರೋಗ್ಯ ಉತ್ತಮ.
ಮಕರ
ಕಾರ್ಯನಿಮಿತ್ತ ಅತ್ತೆ-ಸೊಸೆಯಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ, ಸಮಾಧಾನವನ್ನು ಇಬ್ಬರೂ ಪರಸ್ಪರ ಕಾಪಾಡಿಕೊಳ್ಳಿ. ಪದವೀಧರರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಂಭವವಿದೆ.
ಕುಂಭ
ಧೈರ್ಯ, ಸಾಹಸ, ಎದೆಗಾರಿಕೆಯ ಬಗ್ಗೆ ಮಿತ್ರರು, ಬಂಧುಗಳು ಟೀಕಿಸುವವರಿದ್ದಾರೆ, ಲೆಕ್ಕಿಸದೆ ಮುನ್ನುಗ್ಗಿ. ಶ್ರೀರಾಮನ ಭಜನೆಯ ಫಲವಾಗಿ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳು ತೃಪ್ತಿಕರವಾಗಿರುವುದು.
ಮೀನ
ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ವಾಹನ ಅಥವಾ ವಸ್ತ್ರಾಭರಣ ಪ್ರಾಪ್ತಿಯಾಗಲಿದೆ. ಆಮದು ಆಹಾರ ಪದಾರ್ಥಗಳಿಂದ ಲಾಭ ಸಿಗಲಿದೆ. ಸಾಕಷ್ಟು ಆದಾಯ ಮತ್ತು ಹೆಸರು ಬರಲಿದೆ.