‘ಮನ್ನೆ ಇನ್ಫೊಸಿಸ್ ನಾರಾಣಣ್ಣ ‘ಎಲ್ಲಾರೂ ವಾರಕ್ಕೆ 70 ಗಂಟೆ ಕೆಲಸ ಮಾಡಬಕು’ ಅಂದವ್ರೆ. ಅಮೇರಿಕದ ಮಸ್ಕಣ್ಣ ‘100 ಗಂಟೆ ಕೆಲಸ ಮಾಡ್ರಿ’ ಅಂದದೆ’ ಚರ್ಚೆಗೆ ನಾಂದಿ ಹಾಕಿದೆ.

‘ದಿಟ ಕಯ್ಯಾ, ಯವಾರ ಅವರದ್ದಲ್ಲವಾ ಅದಕ್ಕೇ ದಿನಕ್ಕೆ 12 ಗಂಟೆ ಯಾಕೆ 24 ಗಂಟೆನೂ ದುಡೀರಿ ಅಂತರೆ. ಕಾಯಕ ದುಡಿಯೋರದ್ದು, ಕಾಸು ಅವರದ್ದು. ಕೈಸಾಲ ಮಾಡಿಕ್ಯಂದು ರೈತರು ಹೊಲ-ಮನೆ ಅಂತ ಹಗಲು-ರಾತ್ರಿ ದುಡಿಯಕುಲ್ವಾ’ ತುರೇಮಣೆ ಕೆತ್ತೆಬಜೆ ಮಾಡಿದರು.

‘ಹೋದವಾರ ನಕ್ಸಲರನ್ನ ಕಾಡಲ್ಲಿ ಅಟ್ಟಾಡಿಸಿ ಕೊಂದಾಕಿದರಂತೆ. ಶೋಷಿತರ ಪರವಾಗಿ ಕೆಲಸ ಮಾಡ್ತಾ ತಲೆ ತಪ್ಪಿಸಿಕ್ಯಂದು ತಿರುಗೋ ಪಾಪದವು ಕನಣೈ ಅವು. ಅವರಿಗಿಂತಾ ಊರಲ್ಲಿ ಸೇರಿಕ್ಯಂದು ಶೋಷಣೆ ಮಾಡ್ತಿರೋ ನಕ್ಸಲರ ಕಾಟ ಜಾಸ್ತಿಯಾಗ್ಯದೆ’ ಅಂತ ನಿಟ್ಟುಸಿರುಬುಟ್ಟೆ.

‘ಅದ್ಯಾರಲಾ ನಾನು ಕಾಣದೋವು?’ ತುರೇಮಣೆ ಬೆರಗಾದರು.

‘ಬಿಳಿ ಬಟ್ಟೆ ಇಕ್ಕ್ಯಂದು ಸರ್ಕಾರಿ ಭಯೋತ್ಪಾದನೆ ಮಾಡ್ತಿರೋ ರಾಜಕೀಯ ನಕ್ಸಲರು ದೇಶದ ಆರೋಗ್ಯಕ್ಕೆ ಹಾನಿಕರವಾಗ್ಯ ವರೆ. ಜನದ ಇತ-ಪರ ನೋಡದೇ ಇರೋವುನ್ನ ಮಾರಿಬುಡದು ಒಳ್ಳೇದು’ ಅಂತಂದೆ.

‘ಇವುನ್ನ ಯಾರು ತಕ್ಕಂದಾರ್ಲಾ?’

‘ಕ್ರಿಕೆಟ್ ಆಡೋರು ಅವರನ್ನ ಅವರೇ ಮಾರಿಕ್ಯತ್ತಿಲ್ವಾ. ಹಂಗೇ ಇವುನ್ನೂ ಇಂಡಿಯನ್ ಪೊಲಿಟಿಕಲ್ ಲೀಗ್ ಅಂತ ಮಾಡಿ, ಎಷ್ಟಕ್ಕೆ ಹೋತವೋ ಅಷ್ಟಕ್ಕೆ ಹರಾಜಲ್ಲಿ ಸೀದುಬುಟ್ರೆ ಜನಕ್ಕೆ ನೆಮ್ಮದಿ ಆಯ್ತದೆ’.

‘ಆದ್ರೆ ಇವು ಯಾವುದಾದರೊಂದು ಪಕ್ಷಕ್ಕೆ ಹೋಗಿ ಹಿಂದ್ಲಿಂದ, ಮುಂದ್ಲಿಂದ, ಅತ್ಲಿಂದ, ಇತ್ಲಿಂದ ಬಂದು ‘ಎಲ್ಲಿ ಕಳಕೊಂಡಿದ್ದೀನೊ ಅಲ್ಲೇ ಹುಡುಕ್ತೀನಿ’ ಅಂತ್ಲೋ ಇಲ್ಲ ನಿಷ್ಠ-ಅನಿಷ್ಠ ಅಂತ್ಲೋ ಗುಂಪು ಕಟ್ಟಿಗ್ಯಂದು ರೋಸ್ತವಲ್ಲಪ್ಪಾ? ಇವುಕ್ಕೆ ರೇಟು ಯಂಗೆ ಪಿಕ್ಸ್ ಮಾಡದು?’

‘ರಾಜಕೀಯ ನಕ್ಸಲರಿಗೋಸ್ಕರ ಮಾರ್ಸೀಬಿ ವೆಬ್ಸೈಟು ಮಾಡಿ, ಅದರಲ್ಲಿ ಎಲೆಕ್ಟ್ರಾನಿಕ್ಸ್ ರೇಟಿಂಗ್ ಮೆಶೀನ್ ಮಡಗಿ, ಬಿಡ್ ಜಾಸ್ತಿ ಕೂಗಿದೋರಿಗೆ ಕೊಟ್ಟುಬುಡಬಕು’ ನನ್ನ ವಿಚಾರ ಮಂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.