ಬೆಂಗಳೂರು: ಬೆಸ್ಟ್ ಆಫ್ ಕರ್ನಾಟಕ ತಂಡವು ಕರ್ನಾಟಕ ರಾಜ್ಯ ಸಾಫ್ಟಬಾಲ್ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ನಡೆದ ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ ಪ್ರದರ್ಶನ ಕ್ರಿಕೆಟ್ ಪಂದ್ಯದಲ್ಲಿ ಜಯಿಸಿತು.

ಆಚಾರ್ಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಸ್ಟ್ ಆಫ್ ಕರ್ನಾಟಕ ತಂಡವು 28 ರನ್ಗಳಿಂದ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಗೆದ್ದಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು 9 ಓವರ್ಗಳಲ್ಲಿ 9 ವಿಕೆಟ್ಗಳಿಗೆ 75 ರನ್ ಗಳಿಸಿತು. ಅದಕ್ಕುತ್ತರವಾಗಿ ಇಂಡಿಯಾ ತಂಡವು 8.5 ಓವರ್ಗಳಲ್ಲಿ 47 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕ ತಂಡದ ಸ್ಯಾಂಡಿ ಮೂರು ವಿಕೆಟ್ ಗಳಿಸಿದರು.

ಪಂದ್ಯ ಉದ್ಘಾಟಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ, ‘ರಾಷ್ಟ್ರಮಟ್ಟದಲ್ಲಿ ಸಾಫ್ಟ್ ಬಾಲ್ ಕ್ರಿಕೆಟ್ ಮಾದರಿಗೆ ಒಂದು ಉತ್ತಮ ಅವಕಾಶವನ್ನು ಇಲ್ಲಿ ಸೃಷ್ಟಿಸಲಾಗಿದೆ. ಇದು ಸ್ವಾಗತಾರ್ಹ’ ಎಂದರು.

ಸಂಕ್ಷಿಪ್ತ ಸ್ಕೋರು: ಬೆಸ್ಟ್ ಆಫ್ ಕರ್ನಾಟಕ: 9 ಓವರ್ಗಳಲ್ಲಿ 9 ವಿಕೆಟ್ಗಳಿಗೆ 75 (ಸಲೀಂ 25, ರಾಜಾ ಸಾಲಿಗ್ರಾಮ 13, ಸಾಗರ್ ಭಂಡಾರಿ 11, ಆಶಿಕ್ ಅಲಿ 13ಕ್ಕೆ2) ರೆಸ್ಟ್ ಆಫ್ ಇಂಡಿಯಾ: 8.5 ಓವರ್ಗಳಲ್ಲಿ 47 (ಐಶ್ವರ್ಯ ಸುರ್ವೆ 11, ಉಮರ್ ಖಾನ್ 9, ಸ್ಯಾಂಡಿ 1 ರನ್ಗೆ 3) ಫಲಿತಾಂಶ: ಬೆಸ್ಟ್ ಆಫ್ ಕರ್ನಾಟಕ ತಂಡಕ್ಕೆ 28 ರನ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.