ಬೆಂಗಳೂರು: ಬೆಂಗಳೂರು ಈಡಿಗರ ವಿದ್ಯಾರ್ಥಿನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ದತ್ತಿಗಳ ಸಹಯೋಗದಲ್ಲಿ ಭಾನುವಾರ ನಗರದ ಶೇಷಾದ್ರಿಪುರಂ ಈಡಿಗ ಸಂಘದ ಸಭಾಂಗಣದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ನಾಗರಾಜ್ ಅವರು ಕಳೆದ ಸಾಲಿನಲ್ಲಿ ಅಗ್ರ ಶ್ರೇಯಾಂಕಿತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ನೆರವು ನೀಡಿದರು.

ಗೌರವ ಡಾಕ್ಟರೇಟ್ ಪಡೆದಿರುವ ನಳಿನಾಕ್ಷಿ ಸಣ್ಣಪ್ಪ, ಡಾಕ್ಟರೇಟ್ ಗಳಿಸಿದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎಸ್. ಕುನಾಲ್, ಸಾಫ್ಟ್ವೇರ್ ಕಂಪನಿ ತಾಂತ್ರಿಕ ಮುಖ್ಯಸ್ಥ ಡಾ.ಎಸ್.ಅನಿಲ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕೆಪಿಎಸ್ಸಿ ಮಾಜಿ ಸದಸ್ಯ ಡಾ.ಲಕ್ಷ್ಮೀನರಸಯ್ಯ, ಜನತಾ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಇಂದಿರಾ ಗೋಪಾಲಕೃಷ್ಣ, ಸೇಂಟ್ ಫಿಲೋಮಿನಾಸ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಟಿ.ವಿ. ಶ್ರೀನಿವಾಸಮೂರ್ತಿ, ಸಂಘದ ಉಪಾಧ್ಯಕ್ಷಇ.ವಿ.ಸತ್ಯನಾರಾಯಣ, ಕಾರ್ಯದರ್ಶಿ ಎಸ್.ಜೆ. ಕಾಳೇಗೌಡ, ಪತ್ರಕರ್ತ–ಸಾಹಿತಿ ಲಕ್ಷ್ಮಣ ಕೊಡಸೆ ಸೇರಿ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.