ಬೆಂಗಳೂರು: ಮಹದೇವಪುರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ರವೀಂದ್ರ ಶಂಕರ್ ಅವರಿಗೆ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಬಿಬಿಎಂಪಿ ಮಹದೇವಪುರ ವಲಯದ ಬೃಹತ್ ಮಳೆನೀರುಗಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಒತ್ತುವರಿ ಬಗ್ಗೆ ದೂರು ನೀಡಿದ್ದರು. ಬಿ. ನಾರಾಯಣಪುರ ಗ್ರಾಮದ ಸರ್ವೆ ನಂ.136ರಲ್ಲಿ ಬಿಬಿಎಂಪಿ ವಾರ್ಡ್ 56ರಲ್ಲಿ 0.11 ಗುಂಟೆ ಕಾಲುವೆಯನ್ನು ಲೌಲಿ ಮೆಮೊರಿಯಲ್ ಶಾಲೆ ಮತ್ತು ಕಾಲೇಜಿನ ಅಧ್ಯಕ್ಷ ರವೀಂದ್ರ ಶಂಕರ್ ಒತ್ತುವರಿ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ 2018ರ ಜ.11ರಂದು ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಜೂನ್ 26ರಂದು ಅಂತಿಮ ತೀರ್ಪು ಪ್ರಕಟಿಸಿದ್ದು, ರವೀಂದ್ರ ಶಂಕರ್ ಭೂ ಕಬಳಿಕೆದಾರ ಎಂದು ತೀರ್ಮಾನಿಸಿ, ಶಿಕ್ಷೆ ವಿಧಿಸಿದೆ. ಅವರು ದಂಡ ಕಟ್ಟಲು ವಿಫಲವಾದರೆ ಮೂರು ತಿಂಗಳೂ ಹೆಚ್ಚಿನ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಿಕ ಸದಸ್ಯ ಪಾಟೀಲ ನಾಗಲಿಂಗನಗೌಡ ಹಾಗೂ ಎಸ್. ಪಾಲಯ್ಯ ಅವರನ್ನು ಒಳಗೊಂಡ ಕಂದಾಯ ಸದಸ್ಯರು ಆದೇಶ ನೀಡಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಒತ್ತುವರಿದಾರರು ಒಂದು ತಿಂಗಳಲ್ಲಿ ಜಾಗವನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಜಾಗವನ್ನು ಸ್ವಾಧೀನಕ್ಕೆ ಪಡೆಯುವಂತೆ ನಿರ್ದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.