ಬೆಂಗಳೂರು: ‘ಬಿಬಿಎಂಪಿ ವತಿಯಿಂದ ನೀಡಿರುವ ಐ–ಪ್ಯಾಡ್‌ಗಳನ್ನು ಮರಳಿಸದಿರುವ ಪಾಲಿಕೆಯ ಮಾಜಿ ಸದಸ್ಯರು ಮುಂದಿನ ಬಾರಿ ಚುನಾವಣೆಗೆ ನಿಲ್ಲಲು ಸಾಧ್ಯವಾಗುವುದಿಲ್ಲ’ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.

‘ಪಾಲಿಕೆ ಸದಸ್ಯರಿಗೆ ವಿತರಿಸಿದ್ದ ಐ–ಪ್ಯಾಡ್‌ಗಳು ಪಾಲಿಕೆಯ ಸ್ವತ್ತು. ಅಧಿಕಾರಾವಧಿ ಮುಗಿದ ಬಳಿಕ ಸದಸ್ಯರು ಅದನ್ನು ಹಿಂತಿರುಗಿಸಬೇಕು. ಎರಡೆರಡು ಬಾರಿ ಸೂಚನೆ ನೀಡಿದರೂ ಅನೇಕರು ಮರಳಿಸಿಲ್ಲ. ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅವರು ಪಾಲಿಕೆಯ ಏನಾದರೂ ಬಾಕಿ ಉಳಿಸಿಕೊಂಡಿದ್ದಾರೆಯೇ ಎಂಬ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ. ಐ–ಪ್ಯಾಡ್ ಮರಳಿಸದವರ ನಾಮಪತ್ರ ತಿರಸ್ಕೃತಗೊಳ್ಳಲಿದೆ’ ಎಂದು ತಿಳಿಸಿದರು.

‘ಇದುವರೆಗೆ ಐ-ಪ್ಯಾಡ್ ಮರಳಿಸದವರು ಆದಷ್ಟು ಬೇಗ ಅವುಗಳನ್ನು ಬಿಬಿಎಂಪಿಗೆ ಮರಳಿಸಬೇಕು’ ಎಂದು ಕೋರಿದರು.

ಬಿಬಿಎಂಪಿಯ ಮಾಹಿತಿ ತಂತ್ರಜ್ಞಾನ ವಿಭಾಗವು ಪಾಲಿಕೆಯ ಚುನಾಯಿತ ಸದಸ್ಯರಿಗೆ ಹಾಗೂ ನಾಮನಿರ್ದೇಶಿತ ಸದಸ್ಯರಿಗೆ 2018–19ನೇ ಸಾಲಿನಲ್ಲಿ ಆ್ಯಪಲ್ ಕಂಪನಿಯ ಐ–ಪ್ಯಾಡ್‌ಗಳನ್ನು ಒದಗಿಸಿತ್ತು. ಇದಕ್ಕಾಗಿ ಒಟ್ಟು ₹ 99 ಲಕ್ಷ ವೆಚ್ಚವಾಗಿತ್ತು.ಕೌನ್ಸಿಲ್ ಸಭೆಗಳ ಸೂಚನಾ ಪತ್ರ, ಕಾರ್ಯಸೂಚಿಗಳು ಹಾಗೂ ಪ್ರಮುಖ ತೀರ್ಮಾನಗಳ ಕುರಿತು ಐ–ಪ್ಯಾಡ್‌ಗಳ ಮೂಲಕವೇ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿತ್ತು. ಕೆಲವು ಸದಸ್ಯರು ಐ–ಪ್ಯಾಡ್‌ಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು. ಪಾಲಿಕೆಯ 198 ಮಾಜಿ ಸದಸ್ಯರಲ್ಲಿ 100ಕ್ಕೂ ಅಧಿಕ ಮಂದಿ ಐ– ಪ್ಯಾಡ್ ಮರಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.