ಬೆಂಗಳೂರು: ಯುನೈಟೆಡ್ ಬ್ರೀವರೀಸ್ನ (ಯು.ಬಿ) ನಂಜನಗೂಡು ಘಟಕದಲ್ಲಿ ಜುಲೈ 15ರಂದು ಬಾಟ್ಲಿಂಗ್ ಮಾಡಲಾದ 35,000 ಪೆಟ್ಟಿಗೆ ಕಿಂಗ್ಫಿಶರ್ ಬ್ರ್ಯಾಂಡ್ನ ಬಿಯರ್ ಬಾಟಲಿಯ ತಳದಲ್ಲಿ ಬಗ್ಗಡ ಪತ್ತೆಯಾಗಿದ್ದು, ಮಾರಾಟ ನಿರ್ಬಂಧಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.

ಜುಲೈ 15ರಂದು ಬಾಟ್ಲಿಂಗ್ ಮಾಡಲಾದ ಬಿಯರ್ ಬಾಟಲಿಗಳನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮದ ಮೂಲಕ ಸರಬರಾಜು ಮಾಡಲಾಗಿದೆ. ನಿಗಮದ ಗೋದಾಮುಗಳಲ್ಲಿ ಈ ಬಾಟಲಿಗಳ ಸಂಗ್ರಹವಿದೆ. ಮದ್ಯಪಾನಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಬಿಯರ್ ಬಾಟಲಿಗಳ ಮಾರಾಟವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ವಿವಿಧ ಜಿಲ್ಲೆಗಳಲ್ಲಿ ಅಬಕಾರಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

‘ರಾಜ್ಯದಲ್ಲಿ ಉತ್ಪಾದನೆಯಾಗುವ ವಿವಿಧ ಬ್ರ್ಯಾಂಡ್ನ ಮದ್ಯದ ಪ್ರತಿ ಬ್ಯಾಚ್ನ ಎರಡು ಬಾಟಲಿಗಳನ್ನು ಉತ್ಪಾದಕರು ಅಬಕಾರಿ ಆಯುಕ್ತರ ಕಚೇರಿಗೆ ಪರೀಕ್ಷೆಗಾಗಿ ಸಲ್ಲಿಸಬೇಕು. ಕಿಂಗ್ಫಿಶರ್ ಬಿಯರ್ ಬಾಟಲಿಗಳನ್ನೂ ಪರೀಕ್ಷೆಗಾಗಿ ಒದಗಿಸಲಾಗಿತ್ತು. ಅದನ್ನು ಪರೀಕ್ಷಿಸಿದಾಗ ಬಗ್ಗಡ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ’ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ಪನ್ನದಲ್ಲಿ ದೋಷವಿಲ್ಲ ಎಂದು ಯು.ಬಿ ಬ್ರೀವರೀಸ್ ಪ್ರತಿನಿಧಿಗಳು ಸಮಜಾಯಿಷಿ ನೀಡಿದ್ದಾರೆ. ಮಾದರಿಗಳನ್ನು ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ವರದಿ ಬರುವವರೆಗೂ ಮಾರಾಟಕ್ಕೆ ನಿರ್ಬಂಧ ಮುಂದುವರಿಯಲಿದೆ’ ಎಂದು ಅವರು ಹೇಳಿದರು.

ಸದ್ಯದ ದರದಲ್ಲಿ ಮಾರಾಟ ನಿರ್ಬಂಧಿಸಿರುವ 35,000 ಪೆಟ್ಟಿಗೆಗಳಷ್ಟು ಕಿಂಗ್ಫಿಶರ್ ಬಿಯರ್ನ ಒಟ್ಟು ಮೌಲ್ಯ ₹ 19 ಕೋಟಿಗಳಷ್ಟಾಗಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.