ಹಾವೇರಿ: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇ) ಕಾಶಿನಾಥ್ ಭಜಂತ್ರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ.

ನಗರದಲ್ಲಿರುವ ಬಸವೇಶ್ವರನಗರದ 1 ನೇ ಕ್ರಾಸ್ನಲ್ಲಿರುವ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ನಸುಕಿನಲ್ಲಿ ಅಧಿಕಾರಿಗಳ ತಂಡ ಬಾಗಿಲು ಬಡಿದಿತ್ತು. ಅವರನ್ನು ನೋಡಿ ಗಾಬರಿಗೊಂಡ ಕಾಶಿನಾಥ್, ಕೊಠಡಿಗೆ ಹೋಗಿ ₹ 9 ಲಕ್ಷ ನಗದಿನ ಗಂಟು ಕಟ್ಟಿ ಶೌಚಾಲಯದ ಕಿಟಕಿಯ ಮೂಲಕ ಹೊರಗೆ ಎಸೆದಿದ್ದರು.

ಬಾಗಿಲು ತೆರೆಸಿ ನಂತರ ಒಳಗೆ ಬಂದ ಅಧಿಕಾರಿಗಳು, ಗಂಟು ಪತ್ತೆ ಮಾಡಿದ್ದಾರೆ. ₹ 2 ಲಕ್ಷ ನಗದು ಬೆಡ್ ಮೇಲೆಯೇ ಸಿಕ್ಕಿದೆ. ಜೊತೆಗೆ ಒಟ್ಟು ₹ 14 ಲಕ್ಷ ಪತ್ತೆಯಾಗಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಬಂಗಾರ ಸೇರಿದಂತೆ ಹಲವು ಮಹತ್ತರ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.
.ಬೆಳಗಾವಿ: ಮೂವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.