ರಾಜರಾಜೇಶ್ವರಿನಗರ: ‘ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡರಿಗೆ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿರುವುದು, ಸಹಕಾರಿ ಧುರೀಣ ಹಾಗೂ ಸಮಾಜ ಸೇವಕನಿಗೆ ಸಲ್ಲಿಸಿದ ಗೌರವವಾಗಿದೆ’ ಎಂದು ಆರ್ಯ ಈಡಿಗರ ಸಂಘದ ಹಿರಿಯ ಉಪಾಧ್ಯಕ್ಷ ಟಿ.ಶಿವಕುಮಾರ್ ಅಭಿಪ್ರಾಯಪಟ್ಟರು.

ಪ್ರದೇಶ ಆರ್ಯ ಈಡಿಗರ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಎಂ.ತಿಮ್ಮೇಗೌಡರನ್ನು ಅಭಿನಂದಿಸಿ ಅವರು ಮಾತನಾಡಿದರು.

‘ತಿಮ್ಮೇಗೌಡರು, ಸಹಕಾರಿ ಕ್ಷೇತ್ರವಲ್ಲದೇ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಸೇವೆಯಲ್ಲೂ ತೊಡಗಿದ್ದಾರೆ. ಈ ಪುರಸ್ಕಾರ, ಜನಸೇವಕರಿಗೆ ಸಂದಿರುವ ಗೌರವವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಆರ್.ಪಿ.ಪ್ರಕಾಶ್ ಮಾತನಾಡಿ ‘ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಎಲ್ಲ ವರ್ಗದ ಜನರಿಗೆ ಮತ್ತು ಈಡಿಗರ ಸಮಾಜದ ಅಭಿವೃದ್ದಿಗಾಗಿ ತಿಮ್ಮೇಗೌಡರು ಸಹಕಾರ ನೀಡುತ್ತಿದ್ದಾರೆ. ದೇವಾಲಯ, ಶಿಕ್ಷಣ ಸಂಸ್ಥೆಗಳ ಅಭಿವೃದ್ದಿಗೆ ನೆರವಾಗಿದ್ದಾರೆ. ಈ ಪುರಸ್ಕಾರದಿಂದ ಅವರ ಅಭಿವೃದ್ದಿ ಕಾರ್ಯಗಳು ಮತ್ತಷ್ಟು ವಿಸ್ತಾರಗೊಳ್ಳಲಿ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.