ಬೆಂಗಳೂರು: ರೋಟರಿ ಬೆಂಗಳೂರು ಐಟಿ ಕಾರಿಡಾರ್ ಆಶ್ರಯದಲ್ಲಿ 17ನೇ ವರ್ಷದ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ) ಡಿಸೆಂಬರ್ 14ರಂದು ನಡೆಯಲಿದೆ. ವಿಶ್ವದ ಮೊದಲ ಮಧ್ಯರಾತ್ರಿಯ ಮ್ಯಾರಥಾನ್ ಆಗಿರುವ ಈ ಓಟದಲ್ಲಿ 11,000ಕ್ಕೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.

ಈ ವರ್ಷದ ಸ್ಪರ್ಧೆಯು ‘ಸುರಕ್ಷಿತ ನಗರಕ್ಕಾಗಿ ಓಟ’ ಎಂಬ ಘೋಷವಾಕ್ಯ ಹೊಂದಿದೆ. ಡಿ. 14ರಂದು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಕೆಟಿಪಿಒದಲ್ಲಿ ಸಾವಿರಾರು ಅಥ್ಲೀಟುಗಳು, ಕಾರ್ಪೊರೇಟ್ ಸಂಸ್ಥೆ ಪ್ರತಿನಿಧಿಗಳು ಹಾಗೂ ಎನ್ಜಿಒ ಸದಸ್ಯರು ಒಂದೆಡೆ ಸೇರಿ ‘ಮಿಡ್ನೈಟ್ ಮ್ಯಾರಥಾನ್’ಗೆ ರಂಗು ತರಲಿದ್ದಾರೆ ಎಂದು ರೋಟಿ ಬಿಐಟಿಸಿ ಅಧ್ಯಕ್ಷ ಜಗದೀಶ ಗೋಕವರಪು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿಯೂ ಫೋನ್ ಪೇ ಮುಖ್ಯ ಪ್ರಾಯೋಜಕತ್ವ ಹೊಂದಿದೆ.

‘ ಬಾರಿ ಬಿಎಂಎಂನಲ್ಲಿ ಅಂಗವಿಕಲ ಕ್ರೀಡಾಪಟುಗಳ ಸ್ಫೂರ್ತಿ ಹೆಚ್ಚಿಸಲು ಮತ್ತು ಪ್ಯಾರಾ ಅಥ್ಲೀಟ್ಗಳನ್ನು ಗೌರವಿಸಲು ಪ್ಯಾರಾ ಒಲಿಂಪಿಯನ್ ರಕ್ಷಿತಾ ರಾಜು ಅವರನ್ನು ಬಿಎಂಎಂ–2024ರ ರಾಯಭಾರಿಯನ್ನಾಗಿ ಘೋಷಿಸಲಾಗಿದೆ.

ರಕ್ಷಿತಾ ರಾಜು ಅವರು 2022ರ ಪ್ಯಾರಾ ಏಷ್ಯನ್ ಕ್ರೀಡೆಗಳ 1500 ಮೀ (ಟಿ11 ವಿಭಾಗ) ಓಟದಲ್ಲಿ ಚಿನ್ನ ಗೆದ್ದಿದ್ದರು.

ಹೊಸ ಓಟ ಸೇರ್ಪಡೆ:

ಬಿಎಂಎಂ ರೇಸ್ ನಿರ್ದೇಶಕ ಗುಲ್ ಮೊಹಮ್ಮದ್ ಅಕ್ಬರ್ ಮಾತನಾಡಿ, ಈ ಬಾರಿಯ ಬಿಎಂಎಂ ನಲ್ಲಿ ಹೊಸತಾಗಿ 31.6ಕೆ ಓಟ ಸೇರ್ಪಡೆ ಮಾಡಲಾಗಿದೆ. ಹಾಫ್ ಮ್ಯಾರಥಾನ್ನಿಂದ ಫುಲ್ ಮ್ಯಾರಥಾನ್ಗೆ ಬಡ್ತಿ ಹೊಂದಲು ಬಯಸುವವರಿಗೆ ಇದು ಉತ್ತೇಜನ ನೀಡಲಿದೆ' ಎಂದು ತಿಳಿಸಿದರು.

ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಓಟ, 5ಕೆ ಫನ್ ರನ್, ಬಿಕೆ5ಕೆ ರನ್ ಹಾಗೂ ಹೊಸದಾಗಿ ಪರಿಚಯಿಸಲಾಗುತ್ತಿರುವ 31.6ಕೆ ಓಟ ಸೇರಿದಂತೆ ಎಲ್ಲಾ ರೀತಿಯ ರೇಸ್ಗಳಿಗೆ ನೋಂದಣಿ ಆರಂಭಗೊಂಡಿದೆ. ಆನ್ಲೈನ್ನಲ್ಲಿ www.midnightmarathon.in ಮೂಲಕ ಡಿಸೆಂಬರ್ 8ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.