‘ಆರೋಗ್ಯಯುತ ಮಗುವಿಗೆ ಸಹಕಾರಿ’
‘ಭ್ರೂಣದಲ್ಲಿ ಸರಿಪಡಿಸಲಾಗದ ಗಂಭೀರ ಸ್ವರೂಪದ ಸಮಸ್ಯೆ ಕಂಡು ಬಂದಲ್ಲಿ ಜನಿಸಿದ ಒಂದು ವರ್ಷದೊಳಗೆ ಮಗು ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿದ್ದ ಸಂದರ್ಭದಲ್ಲಿ ತಾಯಿಯ ಆರೋಗ್ಯಕ್ಕೆ ತೊಂದರೆ ಆಗುವ ಮುನ್ನವೇ ಕಾನೂನು ಅನ್ವಯ ಗರ್ಭಪಾತಕ್ಕೆ ಕೇಂದ್ರ ನೆರವಾಗಲಿದೆ. ಈ ಮೂಲಕ ನ್ಯೂನತೆಯುಳ್ಳ ಶಿಶುಗಳ ಜನನ ಹೆರಿಗೆ ಸಂದರ್ಭದಲ್ಲಿ ಹಾಗೂ ನಂತರ ಒಂದು ವರ್ಷದ ಅವಧಿಯಲ್ಲಿ ಶಿಶು ಮರಣದಂತಹ ಸಮಸ್ಯೆಗಳನ್ನು ತಡೆಯಲು ಕೇಂದ್ರ ಸಹಕಾರಿಯಾಗಲಿದೆ’ ಎಂದು ಸಂಸ್ಥೆಯ ವೈದ್ಯರು ವಿವರಿಸಿದರು. ‘ಅಂಗ ನ್ಯೂನತೆ ಬುದ್ಧಿ ಮಾಂದ್ಯತೆ ದೃಷ್ಟಿ ಮತ್ತು ಶ್ರವಣ ದೋಷ ಮಿದುಳಿನ ಸಮಸ್ಯೆ ರಕ್ತ ಕಣಗಳ ಸಮಸ್ಯೆ ಶ್ವಾಸಕೋಶದ ಸಮಸ್ಯೆ ಸೇರಿ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ಸಮಸ್ಯೆಗಳನ್ನು ತಡೆಯಲು ಈ ಕೇಂದ್ರ ನೆರವಾಗಲಿದೆ. ಕೇಂದ್ರಕ್ಕೆ ಬರುವವರಿಗೆ ಆಪ್ತ ಸಮಾಲೋಚನೆಯನ್ನೂ ಒದಗಿಸಲಾಗುತ್ತದೆ. ಈಗಾಗಲೇ ಮೊದಲ ಮಗು ಆನುವಂಶಿಕ ಸಮಸ್ಯೆಗೆ ಒಳಗಾಗಿದ್ದಲ್ಲಿ ಎರಡನೇ ಮಗು ಈ ಸಮಸ್ಯೆಗೆ ಒಳಗಾಗದಂತೆ ತಡಯಲು ಕೇಂದ್ರ ನೆರವಾಗುತ್ತದೆ’ ಎಂದರು.