ಬೆಂಗಳೂರು: ತನ್ನ ಸ್ನೇಹಿತನ ಜೊತೆ ಸೇರಿ ತಂಗಿಯನ್ನು ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ ಸಂತ್ರಸ್ತೆಯ ಅಕ್ಕ, ಆಕೆಯ ಸ್ನೇಹಿತ ಮತ್ತು ಸಂತ್ರಸ್ತೆಯ ಸ್ನೇಹಿತನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘37 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯು ವಿವಾಹಿತಳಾಗಿದ್ದು, ತನ್ನ ಬಾಲ್ಯ ಸ್ನೇಹಿತನ ಜೊತೆಗೆ ಪ್ರೀತಿ ಮುಂದುವರೆಸಿದ್ದರು. 2022ರಿಂದ 2023ರವರಗೆ ಕೆಂಗೇರಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ತನ್ನ ಸ್ನೇಹಿತನನ್ನು ಹಲವು ಬಾರಿ ಭೇಟಿಮಾಡಿದ್ದರು. ಆ ಸಂದರ್ಭದಲ್ಲಿ ಇಬ್ಬರ ಮಧ್ಯೆ ದೈಹಿಕ ಸಂಪರ್ಕ ನಡೆದಿತ್ತು’ ಎಂದು ಪೊಲೀಸರು ತಿಳಿಸಿದರು.

‘ಸಂತ್ರಸ್ತೆಯ ಸ್ನೇಹಿತ ವಿಡಿಯೊ ಕರೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ನಗ್ನವಾಗಿದ್ದ ವಿಡಿಯೊ ಕಾಲ್ವೊಂದನ್ನು ರೆಕಾರ್ಡ್ ಮಾಡಿಕೊಂಡಿದ್ದ. ಆತ ಅದನ್ನು ಸಂತ್ರಸ್ತೆಯ ಅಕ್ಕ ಹಾಗೂ ಆಕೆಯ ಸ್ನೇಹಿತನಿಗೆ ಕಳುಹಿಸಿದ್ದಾನೆ. ನಂತರ ಮೂವರೂ ಆರೋಪಿಗಳು ಸೇರಿ ₹80 ಸಾವಿರ ನೀಡುವಂತೆ ಸಂತ್ರಸ್ತೆಗೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಸಿದ್ದರು’ ಎಂಬ ಉಲ್ಲೇಖ ಎಫ್ಐಆರ್ನಲ್ಲಿದೆ.

‘ಆರೋಪಿಗಳು ಸಂತ್ರಸ್ತೆಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಸಂದೇಶಗಳನ್ನು ಕಳುಹಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ನಿನ್ನ ಮಕ್ಕಳನ್ನು ಕೊಲೆ ಮಾಡುತ್ತೇವೆಂದು ಬೆದರಿಸಿದ್ದಾರೆ’ ಎಂದೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.