ಬೆಂಗಳೂರು: ಗೌರಿ-ಗಣೇಶ ಹಬ್ಬದ ನಿಮಿತ್ತ ಸಾಲು ಸಾಲು ರಜೆಗಳಿದ್ದು, ಜನರು ಶನಿವಾರ ರಾತ್ರಿಯಿಂದಲೇ ತಮ್ಮೂರಿನತ್ತ ಹೊರಟರು.

ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಸ್ಯಾಟ್‌ಲೈಟ್ ಬಸ್ ನಿಲ್ದಾಣಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ಮಹಿಳೆಯರು, ಮಕ್ಕಳು, ವೃದ್ಧರು ಲಗೇಜು ಸಮೇತ ನಿಲ್ದಾಣದಲ್ಲಿದ್ದರು. ಸಾರಿಗೆ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಬಸ್‌ಗಳಲ್ಲಿ ಜನರು ಪ್ರಯಾಣಿಸಿದರು.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಮೆಜೆಸ್ಟಿಕ್ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ವಿಪರೀತ ದಟ್ಟಣೆ ಉಂಟಾಯಿತು.

ನಿಲ್ದಾಣಗಳಲ್ಲಿ ಸಂಜೆಯಿಂದಲೂ ಜನರ ಓಡಾಟ ಹೆಚ್ಚಿತ್ತು. ತಡರಾತ್ರಿಯವರೆಗೂ ದಟ್ಟಣೆ ಇತ್ತು.
ಮೈಸೂರು ರಸ್ತೆ ಮೇಲ್ಸೇತುವೆ, ಯಶವಂತಪುರ, ಗೊರಗುಂಟೆಪಾಳ್ಯ ಹಾಗೂ ಸುತ್ತಮುತ್ತ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.