ಪ್ರಸನ್ನಕುಮಾರ್ ಯಾದವ್

ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯಲ್ಲಿ ಸಮಪರ್ಕ ತ್ಯಾಜ್ಯ ವಿಲೇವಾರಿಯಾಗದ ಕಾರಣ ರಸ್ತೆಯ ಸುತ್ತ–ಮುತ್ತ ಎಲ್ಲೆಂದರಲೇ ರಾಶಿಗಟ್ಟಲೇ ಕಸ ಹಾಕಲಾಗಿದ್ದು, ಈ ಪ್ರದೇಶವೆಲ್ಲ ಗಬ್ಬೆದ್ದು ನಾರುತ್ತಿದೆ.

ಗಣಪತಿನಗರದಿಂದ ತಮ್ಮೇನಹಳ್ಳಿಗೆ ಸಂಪರ್ಕಿಸುವ ರಸ್ತೆ, ಹೆಸರಘಟ್ಟ ಮುಖ್ಯರಸ್ತೆ, ಆಚಾರ್ಯ ಕಾಲೇಜು ರಸ್ತೆ, ಎನ್.ಆರ್.ಆರ್ ಕಾಲೇಜು ರಸ್ತೆ, ಅಬ್ಬಿಗೆರೆ ಮುಖ್ಯರಸ್ತೆ, ದ್ವಾರಕಾನಗರ, ನಂದಿನಗರ, ಮಾರುತಿನಗರ, ಕೆರೆ ಗುಡ್ಡದಹಳ್ಳಿ ರಸ್ತೆಗಳ ಇಕ್ಕೆಲ್ಲಗಳಲ್ಲಿ ಕಸದ ರಾಶಿ ಬಿದ್ದಿದ್ದೆ. ಮಳೆ ಬಂದರೆ ತ್ಯಾಜ್ಯವೆಲ್ಲ ಕೊಳೆತು ದುರ್ನಾತ ಬೀರುತ್ತಿದೆ.

ಇದರಿಂದಾಗಿ, ಸೊಳ್ಳೆಗಳು ಮತ್ತು ನೊಣಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ. ಬೀಡಾಡಿ ದನ ಮತ್ತು ನಾಯಿಗಳು ಈ ಕಸವನ್ನು ರಸ್ತೆ ಹರಡಿ ಪರಿಸರವನ್ನು ಹಾಳು ಮಾಡುತ್ತಿವೆ.

‘ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಕಸದ ಸಮಸ್ಯೆ ಬಗೆಹರಿದಿಲ್ಲ. ಪುರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಮುನ್ನ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಎಂ.ಎಚ್. ಪಾಟೀಲ್ ಆಗ್ರಹಿಸಿದರು.

‘ಪುರಸಭೆ ವ್ಯಾಪ್ತಿಯಲ್ಲಿ ಕಸ ಹಾಕಲು ಸರಿಯಾದ ಜಾಗವಿಲ್ಲ. ಲಭ್ಯವಿದ್ದ ಸರ್ಕಾರಿ ಜಾಗವನ್ನು ಬಿಡಿಎ ತೆಗೆದುಕೊಂಡಿದೆ. ಈ ಭಾಗದಲ್ಲಿ ಪ್ರತಿದಿನ ಸುಮಾರು 20 ಟನ್ ಕಸ ಉತ್ಪತ್ತಿಯಾಗುತ್ತದೆ. ಆದರೆ, ನಾವು 10 ಟನ್ ಕಸವನ್ನು ಮಾತ್ರ ದೊಡ್ಡಬಳ್ಳಾಪುರಕ್ಕೆ ಕಳಿಸುತ್ತಿದ್ದೇವೆ. ಭಾನುವಾರ ಕಸ ವಿಲೇವಾರಿಯಾಗು
ವುದಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎ. ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಎಕರೆ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು. ಅದು ಯಲಹಂಕ ವ್ಯಾಪ್ತಿಗೆ ಬರುವುದರಿಂದ ನಮಗೆ ನೀಡಲು ವಿರೋಧ ವ್ಯಕ್ತಪಡಿಸಿದರು. ಇತ್ತೀಚೆಗೆ ಮಳೆ ಸುರಿದಾಗ ಕಸ ವಿಲೇವಾರಿ ಮಾಡಲು ಕಷ್ಟವಾಗುತ್ತಿದೆ. ನಮ್ಮಲ್ಲೇ ಸ್ಥಳಾವಕಾಶ ಇದ್ದಿದ್ದರೆ ಈ ರೀತಿ ಕಸ ಬೀಳುತ್ತಿರಲಿಲ್ಲ. ಕೂಡಲೇ ಕಸದ ಸಮಸ್ಯೆಗೆ ನಿವಾರಣೆ ಮಾಡಲಾಗುವುದು’ ಎಂದು ಹೇಳಿದರು.

ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯಲ್ಲಿ ಕಸ ಹಾಕಲು ಸರಿಯಾದ ಜಾಗವಿಲ್ಲ. ಕಸದ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕೂಡಲೇ ಸಮಸ್ಯೆಗೆ ಪರಿಹಾರ ನೀಡಲಾಗುವುದು.
-ಎಸ್. ಮುನಿರಾಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.