ಬೆಂಗಳೂರು: ‘ಬ್ರೋಕರ್‌ಗಳ ದಂಧೆ, ಮಧ್ಯಸ್ಥರು, ಲಂಚದ ತಾಣ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ದೂಷಿಸಲಾಗುತ್ತಿದೆ. ಇದನ್ನು ಇಲ್ಲಿನ ಸಿಬ್ಬಂದಿ ತೊಡೆದುಹಾಕಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕನ್ನಡ ರಾಜ್ಯೋತ್ಸವ ಸಮಿತಿಯ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾಗರಿಕರಿಗೆ ಬದುಕಿನಲ್ಲಿ ಒಂದು ಮನೆ ಕಟ್ಟಬೇಕೆಂಬ ಆಸೆ ಇರುತ್ತದೆ. ನಿವೇಶನ ಪಡೆಯಲು ಅಂತಹವರು ಬಿಡಿಎಗೆ ಬರುತ್ತಾರೆ. ಅವರೊಂದಿಗೆ ಸಮಾಧಾನದೊಂದಿಗೆ ಮಾತುಕತೆ ನಡೆಸಿ, ಕಾನೂನು ರೀತಿಯಲ್ಲಿ ಕೆಲಸ ಮಾಡಿಕೊಡಿ’ ಎಂದು ಸಲಹೆ ನೀಡಿದರು.

‘ಬಿಡಿಎಗೆ ಖಾಸಗಿ ಡೆವಲಪರ್ಸ್‌ಗಳು ಸ್ಪರ್ಧೆ ನೀಡುತ್ತಿವೆ. ಬಿಡಿಎ ಎಂದರೆ ಕಳಪೆ ಮಟ್ಟದ ಕೆಲಸ ಎಂಬ ಭಾವನೆ ಇದೆ. ಅದನ್ನು ನಿವಾರಿಸಿಕೊಂಡು, ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಬೇಕು. ಇದು ಒಂದೇ ದಿನ ಸಾಧ್ಯವಾಗುವುದಿಲ್ಲ. ಆದರೆ, ಅದನ್ನು ಅಳವಡಿಸಿಕೊಂಡು, ನಿಮಗಿರುವ ಅವಕಾಶದಲ್ಲಿ ಜನರ ಮನ ಗೆಲ್ಲಬೇಕು’ ಎಂದು ಡಿಸಿಎಂ ಆಶಿಸಿದರು.

‘ಬಿಡಿಎ ಗೌರವ ಕಾಪಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನಿಮಗೆ ಯಾವುದೇ ರೀತಿಯ ಸಹಾಯವನ್ನು ನಾನು ಮತ್ತು ಅಧಿಕಾರಿಗಳು ನೀಡುತ್ತೇವೆ’ ಎಂದರು.

ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಆಯುಕ್ತ ಎನ್. ಜಯರಾಮ್, ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಆರ್. ಮಂಜುನಾಥ್, ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.