ಬೆಂಗಳೂರು: ಇಲ್ಲಿನ ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ದೀಪಿಕಾ (14) ಮ್ಯಾನ್‌ಹೋಲ್‌ಗೆ ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾಳೆ.

ನಾರಾಯಣ ಶಾಲೆಯಲ್ಲಿ 9ನೇ ತರಗತಿ ದೀಪಿಕಾ ಓದುತ್ತಿದ್ದಳು. ಮಂಗಳವಾರ ರಾತ್ರಿ ಹೆಬ್ಬಾಳ ಭಾಗದಲ್ಲಿ ಧಾರಾಕಾರ ಮಳೆ ಸುರಿದಿತ್ತು. ರಸ್ತೆಯಲ್ಲಿ ಮಳೆಯ ನೀರು ಹರಿಯುತ್ತಿದ್ದ ಪರಿಣಾಮ ಯಾರಿಗೂ ಮ್ಯಾನ್‌ಹೋಲ್ ಅಪಾಯಕ್ಕೆ ಆಹ್ವಾನಿಸುತ್ತಿರುವುದು ಕಾಣಿಸುತ್ತಿರಲಿಲ್ಲ.

ಶಾಲೆಗೆ ತೆರಳುವ ಧಾವಂತದಲ್ಲಿದ್ದ ದೀಪಿಕಾಗೆ ಬೈಕ್ ಅಡ್ಡ ಬಂತು. ಹೀಗಾಗಿ ಮುಂದಕ್ಕೆ ಚಲಿಸಲು ಹೋಗಿ ಮ್ಯಾನ್‌ಹೋಲ್‌ಗೆ ಬಿದ್ದಳು. ಆಕೆ ಕೂಗಿಕೊಂಡಾಗಸ್ಥಳದಲ್ಲಿದ್ದ ಪಾದಚಾರಿಗಳು ಮೇಲಕ್ಕೆತ್ತಿ ಅಪಾಯದಿಂದ ಪಾರು ಮಾಡಿದ್ದಾರೆ. ವಿದ್ಯಾರ್ಥಿನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಿ

ಬಿಎಂಪಿ ಸಿಬ್ಬಂದಿ ಮ್ಯಾನ್‌ಹೋಲ್ ದುರಸ್ತಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ನಗರದ ವಿವಿಧೆಡೆ ಮ್ಯಾನ್‌ಹೋಲ್‌ಗಳು ಅಪಾಯದ ಮುನ್ಸೂಚನೆ ನೀಡುತ್ತಿವೆ. ಮಳೆ ಬಂದಾಗ ಅಪಾಯ ಖಚಿತ. ಮೊದಲು ನಗರದ ಗುಂಡಿಗಳನ್ನು ಮುಚ್ಚಬೇಕು. ಮ್ಯಾನ್‌ಹೋಲ್ ದುರಸ್ತಿ ಪಡಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.