ಬೆಂಗಳೂರು: ಮಾಲೀಕರು ಮನೆಯ ಒಳಗಿದ್ದ ವೇಳೆಯೇ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಂಕರಪುರದ ನಿವಾಸಿ ಅಫ್ರಿದಿ ಬಂಧಿತ.

ಬಸವನಗುಡಿಯ ಉತ್ತರಾದಿ ಮಠ ರಸ್ತೆಯ ನಿವಾಸಿ ಸಮೀರ್ ಆರ್. ಕಟ್ಟಿ ಅವರ ಮನೆಯಲ್ಲಿ 20 ಗ್ರಾಂ. ಬಂಗಾರ ಮತ್ತು ₹67 ಸಾವಿರ ನಗದು ದೋಚಿ ಆರೋಪಿ ಪರಾರಿಯಾಗಿದ್ದ. ಮನೆ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಏಕಾದಶಿಯ ದಿನ ಸಮೀರ್ ಅವರ ತಾಯಿ ಹಾಗೂ ಅವರ ಸ್ನೇಹಿತೆಯರು ಅಡುಗೆ ಕೋಣೆಯಲ್ಲಿ ರಾಮಭಜನೆ ಮಾಡುತ್ತಿದ್ದರು. ಸಮೀರ್ ಮಹಡಿಯ ಕೋಣೆಯಲ್ಲಿ ಇದ್ದರು. ಅದೇ ಸಂದರ್ಭದಲ್ಲಿ ಮನೆಯೊಳಗೆ ಬಂದಿದ್ದ ಕಳ್ಳ, ಸಮೀರ್ ತಂದೆ ಇರುವ ಕೋಣೆಯ ಒಳಗೆ ಹೋಗಿದ್ದ. ನಿದ್ರೆಯಲ್ಲಿದ್ದ ಅವರನ್ನು ನೋಡಿ, ಕೊಠಡಿಯಲ್ಲಿದ್ದ ಮೊಬೈಲ್ ಮತ್ತು ₹ 67,500 ನಗದು ಹಾಗೂ ಚಿನ್ನದ ಉಂಗುರ ಹಾಗೂ ಒಂದು ಚಿನ್ನದ ನಾಣ್ಯವನ್ನು ಕದ್ದು ಪರಾರಿಯಾಗಿದ್ದ. ಆರೋಪಿಯ ಚಲನವಲನ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.