ಬೆಂಗಳೂರು: ಕುಖ್ಯಾತ ರೌಡಿ ರವಿಕುಮಾರ್ ಅಲಿಯಾಸ್ ಟ್ಯಾಂಗೋ ವಿರುದ್ಧ ಬಸವೇಶ್ವನಗರ ಪೊಲೀಸರು ಗೂಂಡಾ ಅಸ್ತ್ರ ಪ್ರಯೋಗಿಸಿದ್ದಾರೆ.

ತುಮಕೂರು ಜಿಲ್ಲೆ ಶೆಟ್ಟಿಪುರ ಗ್ರಾಮದ ಈತ, ಆರು ವರ್ಷಗಳ ಹಿಂದೆ ನಗರಕ್ಕೆ ಬಂದು ವೃಷಭಾವತಿನಗರದಲ್ಲಿ ನೆಲೆಸಿದ್ದ. ರವಿಕುಮಾರ್ ವಿರುದ್ಧ ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಚಂದ್ರಾಲೇಔಟ್, ಮಾದನಾಯಕನಹಳ್ಳಿ, ವಿಜಯನಗರ, ರಾಜಗೋಪಾಲನಗರ ಹಾಗೂ ಕಾಟನ್‌ಪೇಟೆ ಠಾಣೆಗಳಲ್ಲಿ 15 ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

‘ಮೂರು ಸಲ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ರವಿಕುಮಾರ್, ಗ್ಯಾಂಗ್ ಕಟ್ಟಿಕೊಂಡು ದಾಂದಲೆ ಮಾಡುತ್ತಿದ್ದ. ಹೀಗಾಗಿ, ಬುಧವಾರ ಆತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಈ ಕಾಯ್ದೆ ಪ್ರಯೋಗಿಸಿದರೆ, ಇತರೆ ಪ್ರಕರಣಗಳಂತೆ ಆರೋಪಿಯನ್ನು 24 ತಾಸುಗಳೊಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯವಿಲ್ಲ. ಬದಲಿಗೆ ಪೊಲೀಸರೇ ಆತನನ್ನು ನೇರವಾಗಿ ಜೈಲಿಗೆ ಕಳುಹಿಸಬಹುದು. ಗರಿಷ್ಠ ಒಂದು ವರ್ಷದವರೆಗೆ ಆರೋಪಿ ಜೈಲಿನಲ್ಲೇ ಇರಬೇಕು. ಈ ಸಂದರ್ಭದಲ್ಲಿ ಬಂಧಿತರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗುವಂತಿಲ್ಲ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.