ದಿನ ಭವಿಷ್ಯ: ಮಾತೃ ವರ್ಗದವರ ಸಹಾಯದಿಂದ ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುವುದು
Published 6 ನವೆಂಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೂಲಮನೆಯಲ್ಲಿ ಅಮೂಲ್ಯ ವಸ್ತುಗಳ ಚೋರ ಕೃತ್ಯಗಳು ನಡೆಯಲಿವೆ. ತುಂಬ ವಿಶ್ವಾಸವಿರುವಂಥ ವ್ಯಕ್ತಿಗಳು ಅಥವಾ ಸಂಬಂಧಿಗಳು ಮನೆಗೆ ಆಗಮಿಸಬಹುದು.
ವೃಷಭ
ಮಾತೃ ವರ್ಗದವರ ಸಹಾಯದಿಂದ ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುವುದು. ಕಳೆಗುಂದಿದ ಮನಸ್ಸಿಗೆ ಗೆಳೆಯರ ಜತೆ ಸ್ವಲ್ಪ ಮಾತುಕತೆ ನಡೆಸುವುದರಿಂದ ಸಮಾಧಾನ ಸಿಗಲಿದೆ.
ಮಿಥುನ
ಹೊಸ ಮನೆಗೆ ಬೇಕಾದ ವಸ್ತುಗಳ ಖರೀದಿಗೆ ಮುಂದಾಗುವಿರಿ. ಕಚೇರಿಯ ಕೆಲಸಗಳನ್ನು ಅಂದಿನದ್ದನ್ನು ಅಂದೇ ಮುಗಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.
ಕರ್ಕಾಟಕ
ವ್ಯವಹಾರಗಳಲ್ಲಿ ಜಯವಿದ್ದು, ದೊಡ್ಡ ಕಂಪನಿಯೊಂದಿಗೆ ಪಾಲುದಾರಿಕೆಯ ಅವಕಾಶ ಸಿಗಲಿದೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಶುಚಿತ್ವ ಕಾಪಾಡಿಕೊಳ್ಳಿ.
ಸಿಂಹ
ಸಂಘ -ಸಂಸ್ಥೆಗಳ ಜವಾಬ್ದಾರಿ ನೋಡುವವರಿಗೆ ನಾಲ್ಕಾರು ಮಾತುಗಳನ್ನು ಕೇಳಬೇಕಾಗುವುದು. ಇತರರ ಮಾತುಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳುವ ಬದಲು ತಪ್ಪುಗಳನ್ನು ಸರಿಪಡಿಸಿಕೊಳ್ಳಿ.
ಕನ್ಯಾ
ಸರ್ಕಾರಿ ಅಧಿಕಾರಿಗಳಲ್ಲಿ ವಿನಯಪೂರ್ವಕವಾಗಿ ನಡೆದುಕೊಳ್ಳುವುದರಿಂದ ಕೆಲಸ ಸರಾಗವಾಗಿ ನಡೆಯುವುದು. ಸಮಾಜದ ಹಿತಕ್ಕಾಗಿ ಮಾಡುತ್ತಿರುವ ಕೆಲಸದಲ್ಲಿ ಜಯ ದೊರೆಯುತ್ತದೆ.
ತುಲಾ
ಜನಗಳ ಕೆಟ್ಟ ದೃಷ್ಟಿಯ ಫಲ, ಸೋಮಾರಿತನವು ಸೇರಿಕೊಂಡು ಉದ್ಯೋಗ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ಸ್ಟೇಷನರಿ ವ್ಯಾಪಾರ ಕೈಗೊಳ್ಳುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಸುವಿರಿ.
ವೃಶ್ಚಿಕ
ನಿಮ್ಮ ದಿನಚರಿ ಹಾಗೂ ಕೈಗೊಳ್ಳಲಿರುವ ನಿರ್ಧಾರಗಳು ಅಗತ್ಯವಾಗಿ ತಿಳಿದಿರಲಿ. ಹೆಂಡತಿಯ ತವರುಮನೆಯ ಕಡೆಯಿಂದ ಅಗತ್ಯದ ಸಹಾಯವಾಗಲಿದೆ.
ಧನು
ಉತ್ತಮ ಅವಕಾಶಗಳು ನಿಮ್ಮೆಡೆಗೆ ಬರಲಿದೆ. ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ. ಸಂಗೀತವನ್ನು ಕಲಿಯುವ ಆಸಕ್ತರಿಗೆ ವಾದ್ಯಗಳ ಖರೀದಿಯ ಯೋಗವಿದೆ.
ಮಕರ
ಪರಿಸ್ಥಿತಿ ಸೂಕ್ಷ್ಮವಾಗಿ ಅವಲೋಕಿಸಿಕೊಂಡು ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿ ಅವಿಶ್ರಾಂತವಾಗಿ ದುಡಿಯುವಿರಿ. ಕುಟುಂಬದ ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷಿಸಬೇಡಿ.
ಕುಂಭ
ಸರಳ ಸ್ವಭಾವವನ್ನು ಇತರರು ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳ ಆಲೋಚನೆಗೆ ಸರಿ ಹೊಂದುವಂಥ ಶಿಕ್ಷಕರು ದೊರಕಿ ಯಶಸ್ಸಿಗೆ ದಾರಿದೀಪವಾಗುತ್ತಾರೆ.
ಮೀನ
ವೃತ್ತಿ ಬದುಕಿನಲ್ಲಿ ಕ್ರಾಂತಿಕಾರಿ ಅನಿಸಿಕೆ ಅಭಿಪ್ರಾಯಗಳಿಗೆ ಹೆಚ್ಚಿನ ವಿರೋಧ ಬರಲಿದೆ. ಕೆಲವೊಂದು ಬಾರಿ ಒಳ್ಳೆಯದಾಗಲು ಇತರರ ವಿರೋಧವನ್ನು ಕಟ್ಟಿಕೊಳ್ಳುವುದು ಅನಿವಾರ್ಯ.