ಬೆಂಗಳೂರು: ಸೋಲಿನಿಂದ ಹೊರಬರಲು ನಿರ್ಧರಿಸಿರುವ ಬೆಂಗಳೂರು ಎಫ್ಸಿ ತಂಡ ತವರಿನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು ಎದುರಿಸಲಿದೆ.

ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ತಂಡ ಲೀಗ್ನಲ್ಲಿ ಐದು ಗೆಲುವು ಮತ್ತು ಒಂದು ಡ್ರಾದೊಂದಿಗೆ ಒಟ್ಟು ಏಳು ಪಂದ್ಯಗಳಿಂದ 16 ಪಾಯಿಂಟ್ಸ್ ಪಡೆದಿದೆ. ಸತತ ಆರು ಪಂದ್ಯಗಳನ್ನು ಗೆದ್ದು ಮುನ್ನಗುತ್ತಿದ್ದ ಬೆಂಗಳೂರು ಎಫ್ಸಿ ತಂಡದ ಗೆಲುವಿನ ಓಟಕ್ಕೆ ಮೊನ್ನೆ ಎಫ್ಸಿ ಗೋವಾ ತಂಡ (3–0) ಗೆದ್ದು ತಡೆಹಾಕಿತ್ತು.

ಕಳೆದ ಪಂದ್ಯದಲ್ಲಿ ಹಿನ್ನೆಡೆ ಹೊರತಾಗಿಯೂ ಗೆರಾರ್ಡ್ ಜರಗೋಜಾ ಅಡಿಯಲ್ಲಿ ತರಬೇತಿ ಪಡೆದಿರುವ ಆತಿಥೇಯರು ಎಲ್ಲಾ ವಿಭಾಗಗಳಲ್ಲೂ ಸೊಗಸಾದ ಪ್ರದರ್ಶನ ನೀಡಿದ್ದರು. ಅಭಿಮಾನಿಗಳ ವಿಶ್ವಾಸ ಹೆಚ್ಚಿಸಲು ಮತ್ತೆ ಪುಟಿದೇಳಬೇಕಿದೆ.

ಆದರೆ ನಾರ್ಥ್ ಯುನೈಟೆಡ್ ಎಫ್ಸಿ ವಿರುದ್ಧದ ಕದನ ಅಷ್ಟು ಸುಲಭವಾಗಿಲ್ಲ. ಕಳೆದ ಪಂದ್ಯದಲ್ಲಿ ಒಡಿಶಾ ಎಫ್ಸಿಎ ವಿರುದ್ಧ ನಾರ್ಥ್ ಈಸ್ಟ್ ತಂಡ 3–2 ಗೋಲುಗಳಿಂದ ಜಯಿಸಿತ್ತು. ಇದಲ್ಲದೇ ಈ ಲೀಗ್ನಲ್ಲಿ ನಾರ್ಥ್ ಈಸ್ಟ್ ಬರೋಬ್ಬರಿ 17 ಗೋಲುಗನ್ನು ಬಾರಿಸಿದೆ. ಲೀಗ್ನಲ್ಲೇ ಅತಿ ಹೆಚ್ಚು ಗೋಲುಗಳು ಇದಾಗಿದೆ. ಬೆಂಗಳೂರು ಎಫ್ಸಿ 7 ಪಂದ್ಯಗಳಿಂದ 11 ಗೋಲು ಹೊಡೆದಿದೆ.

ನಾರ್ಥ್ಈಸ್ಟ್ ತಂಡ 7 ಪಂದ್ಯಗಳಿಂದ 3 ಗೆಲುವು ಮತ್ತು 2 ಡ್ರಾಗಳೊಂದಿಗೆ ಒಟ್ಟು 11 ಅಂಕಗಳೊಂದಿಗೆ ಪಟ್ಟಿಯಲ್ಲಿ ಆರನೆ ಸ್ಥಾನ ಪಡೆದಿದೆ.

ಬೆಂಗಳೂರು ಎಫ್ಸಿ ಕಂಠೀರವ ಮೈದಾನದಲ್ಲಿ ಈ ಹಿಂದೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದ್ದು ಮತ್ತೊಂದು ಅಮೋಘ ಪ್ರದರ್ಶನಕ್ಕೆ ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.