ಮುಂಬೈ: ಭಾರತ ತಂಡಕ್ಕೆ ಮರುಪ್ರವೇಶಿಸುವ ತವಕದಲ್ಲಿರುವ ಶ್ರೇಯಸ್ ಅಯ್ಯರ್ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಗುರುವಾರ ಒಡಿಶಾ ವಿರುದ್ಧ ದ್ವಿಶತಕ ದಾಖಲಿಸಿದರು.

ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೇಯಸ್ (233; 228ಎ, 4X24, 6X9) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 123.5 ಓವರ್ಗಳಲ್ಲಿ 4 ವಿಕೆಟ್ಗಳಿಗೆ 602 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ತಂಡದ ಸಿದ್ದಾರ್ಥ್ ಲಾಡ್ (ಬ್ಯಾಟಿಂಗ್ 169) ಕೂಡ ಶತಕ ಗಳಿಸಿದರು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಒಡಿಶಾ ತಂಡವು ಎರಡನೇ ದಿನದಾಟದ ಕೊನೆಗೆ 49 ಓವರ್ಗಳಲ್ಲಿ 5 ವಿಕೆಟ್ಗಳಿಗೆ 146 ರನ್ ಗಳಿಸಿದೆ. ತಂಡದ ಬ್ಯಾಟರ್ ಸಂದೀಪ್ ಪಟ್ನಾಯಕ್ (ಬ್ಯಾಟಿಂಗ್ 73) ಕ್ರೀಸ್ನಲ್ಲಿದ್ದಾರೆ.

ಕನ್ನಡಿಗ ನಿಶ್ಚಲ್ ಶತಕ

ಸೊವಿಮಾ: ಕನ್ನಡಿಗ ಡೇಗಾ ನಿಶ್ಚಲ್ (ಬ್ಯಾಟಿಂಗ್ 103; 168ಎ, 4X6) ಅವರ ಶತಕದ ಬಲದಿಂದ ನಾಗಾಲ್ಯಾಂಡ್ ತಂಡವು ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಸಿಕ್ಕಿಂ ಎದುರು ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂವು 106 ಓವರ್ಗಳಲ್ಲಿ 192 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ನಾಗಾಲ್ಯಾಂಡ್ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್ಗಳಲ್ಲಿ 2 ವಿಕೆಟ್ಗಳಿಗೆ 194 ರನ್ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.