ಬೆಂಗಳೂರು: ಆಟೊ ಸೇವೆ ಪಡೆಯಲು ಆನ್ಲೈನ್ನಲ್ಲಿ ಬುಕ್ ಮಾಡುವುದಕ್ಕೆ ಶೇ 5ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರ ಸರಿಯಲ್ಲ, ಇದರಿಂದ ಹೆಚ್ಚಿನ ಹೊರೆ ಆಗಲಿದೆ ಎನ್ನುವುದು ಬಹುಪಾಲು ಜನರ ಅಭಿಪ್ರಾಯ. ಆದರೆ, ಆಫ್ಲೈನ್ ಆಟೊ ಸೇವೆಯಲ್ಲಿ ಆಗುವ ಸಮಸ್ಯೆಗಳನ್ನು ಗಮನಿಸಿದರೆ, ತುಸು ದುಬಾರಿ ಆದರೂ ಆನ್ಲೈನ್ ಸೇವೆಯೇ ಹೆಚ್ಚು ಅನುಕೂಲ ಎನ್ನುವ ಅಭಿಪ್ರಾಯವೂ ಕೆಲವರದ್ದು. 2022ರ ಜನವರಿ 1ರಿಂದ ಶೇ 5ರಷ್ಟು ಜಿಎಸ್ಟಿ ಜಾರಿಗೆ ಬರಲಿದೆ.

ನಾವು ಬಳಸುವ ಸೇವೆಗಳಿಗೆ ತೆರಿಗೆ ಕೊಡಬೇಕಾಗುತ್ತದೆ. ದುಬಾರಿ ಆದರೂ ಪಾವತಿ ಸಾಮರ್ಥ್ಯ ಇರುವವರು, ಅನುಕೂಲ ಬಯಸುವವರು ಆನ್ಲೈನ್ ಬುಕಿಂಗ್ ಮಾಡೇ ಮಾಡುತ್ತಾರೆ ಎನ್ನುವುದು ತಜ್ಞರು ವಾದ. ಮಧ್ಯಮ, ಮೇಲ್ಮಧ್ಯಮ ವರ್ಗ ಈ ತರಹದ ಆಟೊ ಸೇವೆಗೆ ಹೆಚ್ಚು ಒಗ್ಗಿಕೊಂಡಿದೆ. ಆದರೆ, ಈಗಲೇ ಇದನ್ನು ಜಾರಿಗೆ ತರುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆಯನ್ನೂ ಅವರು ಕೇಳುತ್ತಾರೆ.

‘ಈಗ ಇದರ ಅಗತ್ಯ ಇತ್ತೇ?’

ಈಗ ಇಂತಹ ನಿರ್ಧಾರ ಕೈಗೊಳ್ಳುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ. ಸರ್ಕಾರಕ್ಕೆ ಬರುವ ವರಮಾನ ಕಡಿಮೆ ಇದೆ ಎಂದಾಗ ಹೊಸ ಮೂಲದಿಂದ ವರಮಾನ ಸಂಗ್ರಹಕ್ಕೆ ಮುಂದಾಗುವುದು ಸಹಜ. ಆದರೆ, ಕಳೆದ ಕೆಲವು ತಿಂಗಳುಗಳಿಂದ ತೆರಿಗೆ ಸಂಗ್ರಹ ಚೆನ್ನಾಗಿದೆ. ಸೇವಾ ವಲಯವು ಇನ್ನೂ ಪೂರ್ಣವಾಗಿ ಹಳಿಗೆ ಮರಳಿಲ್ಲ. ಹೀಗಾಗಿ, ಈ ನಿರ್ಧಾರವನ್ನು ಕನಿಷ್ಠ ಆರು ತಿಂಗಳವರೆಗೆ ಮುಂದೂಡಬಹುದಿತ್ತು. ಇಲ್ಲಿ ಸಂಗ್ರಹ ಆಗುವ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎನ್ನುವುದೂ ಬಹಳ ಮುಖ್ಯವಾಗಲಿದೆ.

-ಡಿ. ಮುರಳೀಧರ, ಆರ್ಥಿಕ ತಜ್ಞ

‘ಬಳಸಿಕೊಳ್ಳುವ ಸೇವೆಗೆ ತೆರಿಗೆ’

ನಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವ ಸೇವೆಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ ಗ್ರಾಹಕರಿಗೆ ಹೊರೆ ಆಗುವುದಿಲ್ಲವೇ ಎಂದರೆ, ನಮ್ಮ ಅನುಕೂಲಕ್ಕೆ ಬಳಕೆ ಮಾಡುವ ಪ್ರತಿ ಸೇವೆಗೂ ತೆರಿಗೆ ಕೊಡಬೇಕಾಗತ್ತದೆ. ವಾಹನ ನಮ್ಮ ಮನೆ ಬಾಗಿಲಿಗೆ ಬರುತ್ತದೆ. ದಾರಿ ತೋರಿಸುವ ಅಗತ್ಯ ಇರುವುದಿಲ್ಲ, ಹೆಚ್ಚಿನ ಸುರಕ್ಷತೆ ಇರುತ್ತದೆ ಎಂಬೆಲ್ಲಾ ಕಾರಣಗಳಿಂದ ಓಲಾ, ಉಬರ್ ಬುಕ್ ಮಾಡುತ್ತೇವೆ. ಚಾಲಕರ ಪೂರ್ಣ ವಿವರದ ಜೊತೆಗೆ ಆಟೊ ಹತ್ತಿದ್ದು ಎಷ್ಟು ಹೊತ್ತಿಗೆ, ಯಾವ ಜಾಗದಲ್ಲಿ, ಎಷ್ಟು ಹೊತ್ತಿಗೆ ಇಳಿದದ್ದು ಎನ್ನುವ ಮಾಹಿತಿಗಳೆಲ್ಲವೂ ಇರುತ್ತದೆ. ಏನಾದರೂ ಸಮಸ್ಯೆ ಆದರೆ ಕಂಪನಿಗೆ ದೂರು ನೀಡುವ ಅವಕಾಶವೂ ಇದೆ. ಆದರೆ, ಸಾಮಾನ್ಯ ಆಟೊದಲ್ಲಿ ಹೋಗುವುದಾದರೆ ಎಲ್ಲರೂ ಮೀಟರ್ ಹಾಕುವುದಿಲ್ಲ. ಕರೆದೆಡೆಗೆಲ್ಲಾ ಬರುವುದೂ ಇಲ್ಲ. ಗ್ರಾಹಕರನ್ನು ಇಳಿಸುವಾಗ ಹೇಳಿದ್ದಕ್ಕಿಂತ ಹೆಚ್ಚಿನ ದುಡ್ಡು ಕೊಡುವಂತೆ ತಗಾದೆ ತೆಗೆಯುವುದು ಇತ್ಯಾದಿ ಸಮಸ್ಯೆಗಳಿರುತ್ತವೆ.

ಎಲ್ಲ ಸಮಯದಲ್ಲಿಯೂ ಹಣದ ಮುಖ ನೋಡಲು ಆಗುವುದಿಲ್ಲ. ಹಣಕ್ಕಿಂತ ಸಮಯಕ್ಕೆ ಹೆಚ್ಚು ಮೌಲ್ಯ ಇದೆ. ಹೀಗಾ ಗಿ ಸಮಯ ಮತ್ತು ಅನುಕೂಲಕ್ಕೆ ಆದ್ಯತೆ ನೀಡುವವರು ತುಸು ಹೆಚ್ಚಾದರೂ ಪರವಾಗಿಲ್ಲ ಎಂದು ಇಂತಹ ಸೇವೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

-ಬಿ.ಟಿ. ಮನೋಹರ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ಜಿಎಸ್ಟಿ ಸಮಿತಿ ಅಧ್ಯಕ್ಷ

* ‘ಹೊರೆ ಮತ್ತಷ್ಟು ಹೆಚ್ಚಲಿದೆ’ಶನಿವಾರ ಮತ್ತು ಭಾನುವಾರ ಹೊರಗಡೆ ಹೋಗಲು ಆಟೊವನ್ನೇ ಅವಲಂಬಿಸಿದ್ದೇನೆ. ತಕ್ಷಣಕ್ಕೆ ಆಟೊ ಬೇಕು ಎಂದಾಗ ಸಿಗುವುದು ಓಲಾ, ಉಬರ್ ಮಾತ್ರ. ಈಗಾಗಲೇ ಅಗತ್ಯವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದ್ದು, ಇದೀಗ ಆನ್ಲೈನ್ ಆಟೊ ಸೇವೆಗೆ ಜಿಎಸ್ಟಿ ನೀಡುವುದರಿಂದ ಹೊರೆ ಇನ್ನಷ್ಟು ಹೆಚ್ಚಾಗಲಿದೆ.

-ವಿಜಯಲಕ್ಷ್ಮಿ ಎಂ. ಹಿಪ್ಪರಗಿ, ಐ.ಟಿ. ಉದ್ಯೋಗಿ

* ಮಧ್ಯಮ ವರ್ಗಕ್ಕೆ ಅನಿವಾರ್ಯತೆ ಮಧ್ಯಮ ವರ್ಗದವರಿಗೆ ಅತಿ ಹೆಚ್ಚು ಸೇವೆ ನೀಡುತ್ತಿರುವವರೇ ಆಟೊದವರು. ಜಿಎಸ್ಟಿಯಿಂದ ಪ್ರಯಾಣ ದರ ಹೆಚ್ಚಾದರೆ ಅಲವಂಬಿತ ಪ್ರಯಾಣಿಕರು ಹೆಚ್ಚು ಹಣ ನೀಡಿ ಪ್ರಯಾಣಿಸಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಪ್ರಯಾಣ ದರ ಹೆಚ್ಚಳದ ಬಿಸಿ ಪ್ರಯಾಣಿಕರಿಗೇ ಹೊರತು ಆಟೊದವರಿಗಲ್ಲ

-ಪಿ.ವಿ. ಕೊಣ್ಣೂರ, ಅಧ್ಯಕ್ಷರು, ಎಲ್.ಐ.ಎಸ್. ಅಕಾಡೆಮಿ

* ‘ಹೆಚ್ಚುವರಿ ಹಣ ಕಡಿತ: ಅವರ ವ್ಯವಹಾರವೇ ಸರಿ ಇಲ್ಲ’

ಆರಂಭದಲ್ಲಿ ಓಲಾ, ಉಬರ್ ಜೊತೆ ಒಪ್ಪಂದ ಮಾಡಿಕೊಂಡಿದ್ದೆ. ಆದರೆ, ಅವರ ವ್ಯವಹಾರವೇ ಸರಿ ಇಲ್ಲ. ಗ್ರಾಹಕರು ಆಟೊ ಬುಕ್ ಮಾಡುವಾಗ ಬಾಡಿಗೆ ₹ 70 ಆಗುತ್ತದೆ ಅಂತ ಆ್ಯಪ್ನಲ್ಲಿ ತೋರಿಸಲಾಗುತ್ತದೆ. ಇಳಿಯುವಾಗ ₹ 100 ಆಗಿರುತ್ತದೆ. ಇದರಿಂದ ಗ್ರಾಹಕರೊಂದಿಗೆ ನಾವು ಜಗಳಕ್ಕಿಳಿಯುವಂತಾಗುತ್ತದೆ. ಈ ರೀತಿ ಹೆಚ್ಚುವರಿ ಆಗಿ ಗ್ರಾಹಕರಿಂದ ಬರುವ ₹ 30 ಹಣದಲ್ಲಿ ಒಂದು ರೂಪಾಯಿನೂ ಚಾಲಕರಿಗೆ ಸಿಗುವುದಿಲ್ಲ. ಯಾರಾದರೊಬ್ಬರು ಗ್ರಾಹಕರು ಗೂಗಲ್ ಪೇ, ಓಲಾ ಮನಿ ಮೂಲಕ ಹಣ ಪಾವತಿಸಿರೆ ಆಗ ಕಂಪನಿಯು ನಮ್ಮ ಖಾತೆಯಿಂದ ಆ ಹೆಚ್ಚುವರಿ ಹಣವನ್ನು ಕಡಿತ ಮಾಡಿಕೊಳ್ಳುತ್ತದೆ.

-ರಮೇಶ, ಆಟೊ ಚಾಲಕ

ನಿರ್ವಹಣೆ: ವಿಶ್ವನಾಥ ಶರ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.