ಬೆಂಗಳೂರು:ಹೊಟ್ಟೆಯು ಬೆನ್ನಿನತ್ತ ಹೊರಳಿದ್ದರಿಂದ ಸಮಸ್ಯೆ ಎದುರಿಸುತ್ತಿದ್ದ ಸರ್ಜಾಪುರದ ಅಂಗವಿಕಲ ಕಾರ್ಮಿಕ ಮಹಿಳೆಗೆ ಕಲ್ಯಾಣನಗರದ ಸ್ಪೆಷಲಿಸ್ಟ್ ಆಸ್ಪತ್ರೆಯ ವೈದ್ಯರು ಶನಿವಾರ ಹೆರಿಗೆ ಮಾಡಿಸಿದ್ದು, ತಾಯಿ–ಮಗು ಆರೋಗ್ಯವಾಗಿದ್ದಾರೆ.

29 ವರ್ಷದ ಸುಮಾ ಎಂಬುವವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪೋಲಿಯೊ ಪೀಡಿತರಾಗಿದ್ದ ಅವರಿಗೆ, ಊರುಗೋಲಿನ ನೆರವಿಲ್ಲದೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಪತಿ ಮಂಜುನಾಥ್ ದಿನಗೂಲಿ ನೌಕರರಾಗಿದ್ದಾರೆ. ಹೊಟ್ಟೆಯ ಭಾಗವು ಬಲಭಾಗಕ್ಕೆ ತಿರುಗಿದ್ದರಿಂದ ದೈನಂದಿನ ಕೆಲಸಗಳೂ ಅವರಿಗೆ ಸವಾಲಾಗಿತ್ತು. ಕಾರ್ಖಾನೆಯೊಂದರಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದ ಅವರು, ಕೋವಿಡ್ ಕಾಣಿಸಿಕೊಂಡ ಬಳಿಕ ಕೆಲಸ ಕಳೆದುಕೊಂಡಿದ್ದರು.

‘ಹೆರಿಗೆ ಪೂರ್ವ ಅವರು ವಿವಿಧ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಂಡಿದ್ದರು. ಶಸ್ತ್ರಚಿಕಿತ್ಸಾ ವೆಚ್ಚವನ್ನು ಪಾವತಿಸಲು ಅವರ ಬಳಿ ಹಣ ಇರಲಿಲ್ಲ. ಅಂತಿಮವಾಗಿ ಅವರು ನಮ್ಮ ಆಸ್ಪತ್ರೆಯನ್ನು ಸಂಪರ್ಕಿಸಿದರು. ನಮ್ಮಲ್ಲಿಗೆ ಬಂದಾಗ ಅವರ ಪರಿಸ್ಥಿತಿಯನ್ನು ಅವಲೋಕಿಸಿ, ಸಂಪೂರ್ಣ ವೆಚ್ಚವನ್ನು ಆಸ್ಪತ್ರೆ ವತಿಯಿಂದಲೇ ಭರಿಸಲು ನಿರ್ಧರಿಸಲಾಯಿತು. ಅವರಿಗೆ ಹೆರಿಗೆ ಮಾಡಿಸುವುದು ಸವಾಲಾಗಿತ್ತು. ಮಗು ಅಥವಾ ತಾಯಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು. ಅವರಿಗೆ ಸಹಜ ಹೆರಿಗೆಯನ್ನೇ ಮಾಡಿಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

‘ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಒಂದೆರಡು ದಿನಗಳಲ್ಲಿ ಮನೆಗೆ ತೆರಳಲಿದ್ದಾರೆ. ಅವರಿಗೆ ₹ 30 ಸಾವಿರ ನೆರವನ್ನೂ ನೀಡಲಾಗಿದೆ. ವೈದ್ಯಕೀಯ ಸಲಹೆಯಿಂದ ಹೆರಿಗೆವರೆಗಿನ ಎಲ್ಲ ವೆಚ್ಚವನ್ನು ಆಸ್ಪತ್ರೆಯೇ ಭರಿಸಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.