ಬೆಂಗಳೂರು: ‘ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯವನ್ನು ತುಲನಾತ್ಮಕವಾಗಿ ನೋಡಿದರೆ, ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ವಚನ ಸಾಹಿತ್ಯಕ್ಕೆ ನೀಡಿದ ಪ್ರಾಧಾನ್ಯವನ್ನು ದಾಸ ಸಾಹಿತ್ಯಕ್ಕೆ ನೀಡಿಲ್ಲ’ ಎಂದು ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಮ್ಮ ನಾಡಿನ ದೇಸಿ ಸಾಹಿತ್ಯದ ಬಗ್ಗೆ ಸರ್ಕಾರಗಳಿಗೆ ಪ್ರೀತಿ ಇರಬೇಕು. ಆದರೆ, ಸರ್ಕಾರ, ವಿಶ್ವವಿದ್ಯಾಲಯಗಳು ದಾಸ ಸಾಹಿತ್ಯಕ್ಕೆ ಪ್ರಾಮುಖ್ಯತೆಯನ್ನೇ ನೀಡಿಲ್ಲ. ಪುರಂದರ ದಾಸರು, ಹರಿದಾಸರ ಕಳೆದುಹೋದ ಹಾಡುಗಳನ್ನು ಹುಡುಕುವ ಪ್ರಯತ್ನವನ್ನು ಈವರೆಗೆ ಯಾವುದೇ ಸರ್ಕಾರ ಮಾಡಿಲ್ಲ. ಈ ಬಗ್ಗೆ ವಿಶ್ವವಿದ್ಯಾಲಯಗಳಿಂದಲೂ ಅಷ್ಟಾಗಿ ಸಂಶೋಧನೆಗಳು ನಡೆದಿಲ್ಲ. ಜನರ ಮನಸ್ಸನ್ನು ಮುಟ್ಟುವ ಶಕ್ತಿ ದಾಸ ಸಾಹಿತ್ಯಕ್ಕಿದ್ದು, ಮಾನವೀಯ ಮೌಲ್ಯವನ್ನು ಒಳಗೊಂಡಿದೆ. ವಚನ ಸಾಹಿತ್ಯವು ಎಲ್ಲರನ್ನೂ ಒಳಗೊಳ್ಳುತ್ತದೆ. ಈ ಸಾಹಿತ್ಯದಲ್ಲಿಯೂ ಮಡಿವಂತಿಕೆ ಬಿಟ್ಟು, ಎಲ್ಲರನ್ನೂ ಒಳಗೊಂಡು ಸಾಗಬೇಕು’ ಎಂದರು.

‘ಹರಿದಾಸರು ಜನರ ಮಧ್ಯೆಯೇ ಇದ್ದರು. ಯಾವತ್ತೂ ಮೂಗು ಮುಚ್ಚಿಕೊಂಡು ಮನೆ, ಮಠಗಳಲ್ಲಿ ಕುಳಿತುಕೊಳ್ಳಲಿಲ್ಲ. ಕಾಯಕ ಧರ್ಮವನ್ನು, ಮನುಷ್ಯ ಜನ್ಮದ ಘನತೆಯನ್ನು ಹಾಡುಗಳಲ್ಲಿ ಎತ್ತಿ ಹಿಡಿದರು. ಲೋಕ ಮೆಚ್ಚುವ ರೀತಿ ಬಾಳಿ, ಬದುಕುವ ಕಲೆಯನ್ನು ಮನೆ ಮನಕ್ಕೆ ತಲುಪಿಸಿ, ಬದುಕನ್ನು ಬಂಗಾರ ಮಾಡಿದರು’ ಎಂದು ಅಭಿಪ್ರಾಯಪಟ್ಟರು.

‘ಪಾಶ್ಚಾತ್ಯ ನಾಗರಿಕತೆಯ ಪ್ರಭಾವ, ನಗರೀಕರಣ, ಜಾಗತೀಕರಣದಿಂದ ವಿಚಿತ್ರಗಳು ಘಟಿಸುತ್ತಿವೆ. ಕುಟುಂಬದ ಸೌಹಾರ್ದತೆಗೆ ಧಕ್ಕೆ ಬಂದು, ಪ್ರೀತಿ, ವಿಶ್ವಾಸ, ಭರವಸೆ ಇಲ್ಲವಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಸಾಹಿತ್ಯಿಕ ಮೌಲ್ಯಗಳ ಸಂರಕ್ಷಣೆ ಹಾಗೂ ಪುನರುತ್ಥಾನಕ್ಕೆ ದಾಸ ಸಾಹಿತ್ಯದ ಅಧ್ಯಯನ ಮಹತ್ವ ಪಡೆದುಕೊಳ್ಳುತ್ತದೆ’ ಎಂದರು.

ಬಾಳಗಾರು ಮಠದ ಅಕ್ಷೋಭ್ಯರಾಮಪ್ರಿಯತೀರ್ಥ ಸ್ವಾಮೀಜಿ, ‘ಹಲವು ಜ್ಞಾನ ಶಿಸ್ತುಗಳ ಆಧಾರದಲ್ಲಿ ಹರಿದಾಸ ಸಾಹಿತ್ಯದ ಅಧ್ಯಯನ ಆರಂಭವಾಗಿ ಹತ್ತಾರು ವರ್ಷಗಳೇ ಕಳೆದಿವೆ. ಹರಿದಾಸರ ಕೃತಿಗಳಲ್ಲಿ ಬಂದಿರುವ ವಿಷಯಗಳಿಗೆ ಸಂಬಂಧಿಸಿದಂತೆ ಶಾಸನಗಳು, ಚಾರಿತ್ರಿಕ ಕಾವ್ಯ, ಸ್ಮಾರಕ, ಪ್ರತಿಮೆ, ನಾಣ್ಯಗಳಿವೆ. ಅವುಗಳ ಅಧ್ಯಯನ ಕೈಗೊಂಡರೆ ಕೃತಿಗಳನ್ನು ರಚಿಸಲು ಸಾಧ್ಯ. ಇದಕ್ಕೆ ವಿದ್ವಾಂಸರ ಪಡೆ ಹಾಗೂ ವಿಶ್ವವಿದ್ಯಾಲಯಗಳ ಬೆಂಬಲಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.