ಬೆಂಗಳೂರಿನ ಮಾಗಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಭಾನುವಾರ ಬಿದ್ದಿದ್ದರಿಂದ ಆಟೊ ಜಖಂಗೊಂಡಿದ್ದು ಚಾಲಕ ಜೀವಾಪಾಯದಿಂದ ಪಾರಾಗಿದ್ದಾರೆ. ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಎಂ.ಜಿ. ರಸ್ತೆ–ಕಸ್ತೂರಬಾ ರಸ್ತೆ ಕಿಂಗ್ ರೋಡ್ ಜಂಕ್ಷನ್‌ನಲ್ಲಿ ಹೊಳೆಯಂತಾದ ರಸ್ತೆಗಳು –ಪ್ರಜಾವಾಣಿ ಚಿತ್ರ/ ಎಸ್.ಕೆ. ದಿನೇಶ್
ಟಿನ್ ಫ್ಯಾಕ್ಟರಿ ಬಳಿ ಜಲಾವೃತಗೊಂಡ ರಸ್ತೆ
ಜಯನಗರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದು
ಲಾಲ್‌ಬಾಗ್ ಬಳಿ ರಸ್ತೆ ಮೇಲೆ ಮರ ಬಿದ್ದಿರುವುದು
ಹೆಬ್ಬಾಳದಲ್ಲಿ ಕಾಲುವೆಯಂತಾಗಿರುವ ರಸ್ತೆಯಲ್ಲಿ ವಾಹನಗಳು ಸಾಗಿದವು
ನಗರದ ಚಾಲುಕ್ಯ ಸರ್ಕಲ್ ಬಳಿ ಅರಮನೆ ರಸ್ತೆಯಲ್ಲಿ ಮರ ಮುರಿದು ರಸ್ತೆಗೆ ಬಿದ್ದಿರುವುದು. –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್
ನಗರದ ಖೋಡೆ ವೃತ್ತದ ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಆಟೊಗಳ ಮೇಲೆ ಬಿದ್ದ ಮರ
ಬಸವೇಶ್ವರ ನಗರ 8ನೇ ಅಡ್ಡರಸ್ತೆಯಲ್ಲಿ ಆಟೊ ಮೇಲೆ ಮರ ಬಿದ್ದಿದ್ದರಿಂದ ಚಾಲಕ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ ಬಿದ್ದಿದ್ದರಿಂದ ರಸ್ತೆ ಬಂದ್ ಆಗಿ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಕೋರಮಂಗಲದಲ್ಲಿ ಆಟೊ ಮತ್ತು ವಿದ್ಯುತ್ ಕಂಬದ ಮೇಲೆ ಮರ ಮುರಿದು ಬಿದ್ದಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮಾಗಡಿ ರಸ್ತೆಯಲ್ಲಿ ಮರ ಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಆಟೊ ಚಾಲಕ ಪಾರಾಗಿದ್ದಾರೆ. ಕೈಗೆ ಗಾಯಗಳಾಗಿವೆ.
ಹೆಚ್ಚು ಮಳೆಯಾದ ಪ್ರದೇಶ;ಸೆಂ.ಮೀ.
ಹೊರಮಾವು;7.1 ವಿದ್ಯಾಪೀಠ;5.3 ಕೊಡಿಗೆಹಳ್ಳಿ;4.6 ಕಾಟನ್‌ಪೇಟೆ;3.9 ದಯಾನಂದನಗರ;3.9 ಪೀಣ್ಯ ಕೈಗಾರಿಕಾ ಪ್ರದೇಶ;3.7 ಜಕ್ಕೂರು;3.6 ನಾಗಪುರ;3.3 ಬೊಮ್ಮನಹಳ್ಳಿ;3.0 ಬಿ.ಟಿ.ಎಂ.ಲೇಔಟ್;3.0 ಮಾರುತಿಮಂದಿರ;3.0 ಚೌಡೇಶ್ವರಿ ವಾರ್ಡ್;2.8 ಯಲಹಂಕ;2.4 ಉತ್ತರಹಳ್ಳಿ;2.3 ಸಂಪಂಗಿರಾಮನಗರ;2.1 ನಾಯಂಡಹಳ್ಳಿ;2.0