ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಸೋಮವಾರ ವಿಪರೀತ ದಟ್ಟಣೆ ಕಂಡುಬಂತು.

ಹೊರವರ್ತುಲ ರಸ್ತೆ ಹಾಗೂ ಕೇಂದ್ರ ವಾಣಿಜ್ಯ ಪ್ರದೇಶದ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಕೆಲ ರಸ್ತೆಗಳಲ್ಲಿ 15 ನಿಮಿಷ ವಾಹನಗಳು ನಿಂತಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.

ಹೊರವರ್ತುಲ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ವಿಪರೀತ ದಟ್ಟಣೆ ಇತ್ತು. ಸಾಫ್ಟ್ವೇರ್ ಎಂಜಿನಿಯರೊಬ್ಬರು (ಟೆಕಿ) ಇದೇ ಮಾರ್ಗವಾಗಿ ಕಚೇರಿಗೆ ಹೊರಟಿದ್ದರು. ಮೇಲ್ಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ, ಬೈಕ್ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅರ್ಧ ಗಂಟೆ ಬೈಕ್ ನಿಂತಲೇ ನಿಂತಿತ್ತು.

ದಟ್ಟಣೆಯಿಂದ ಬೇಸತ್ತ ಎಂಜಿನಿಯರ್, ಬೈಕ್ ಬಂದ್ ಮಾಡಿ ಮೇಲ್ಸೇತುವೆ ಪಕ್ಕದಲ್ಲಿ ಕುಳಿತು, ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿದ್ದರು. ಅವರ ಫೋಟೊ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಜನರು, ‘ದಟ್ಟಣೆಯಿಂದ ರಸ್ತೆಗೆ ಬಂದ ಎಂಜಿನಿಯರ್’ ಎಂದು ಅಡಿ ಬರಹ ಬರೆದಿದ್ದಾರೆ. ಈ ಫೋಟೊವನ್ನು ಹಲವರು ಹಂಚಿಕೊಂಡಿದ್ದು, ಬೆಂಗಳೂರು ದಟ್ಟಣೆ ಸಮಸ್ಯೆಗೆ ಮುಕ್ತಿ ಯಾವಾಗ ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.