ಬೆಂಗಳೂರು: ‘50 ವರ್ಷಕ್ಕೂ ಹಳೆಯದಾದ ಲಾಯಗಳಲ್ಲಿ ಇರುವ ಕುದುರೆಗಳನ್ನು ಅಶ್ವಶಾಲೆಗಳಿಗೆ ಸ್ಥಳಾಂತರ ಮಾಡಲು ಸಾಧ್ಯವೇ’ ಎಂದು ಬೆಂಗಳೂರು ಟರ್ಪ್ ಕ್ಲಬ್(ಬಿಟಿಸಿ) ಅನ್ನು ಹೈಕೋರ್ಟ್ ಪ್ರಶ್ನೆ ಮಾಡಿದೆ.

‘ಟ್ರರ್ಫ್ ಕ್ಲಬ್ನಶೇ 80ರಷ್ಟು ಕುದುರೆ ಲಾಯಗಳು 50 ವರ್ಷಕ್ಕೂ ಹಳೆಯದಾಗಿವೆ’ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯೂಬಿಐ) ನೇಮಕ ಮಾಡಿದ್ದ ಅಧಿಕಾರಿ ಸಲ್ಲಿಸಿರುವ ವರದಿ ಆಧರಿಸಿ ಪೀಠ ಈ ಪ್ರಶ್ನೆ ಮಾಡಿದೆ.

ಸಿಯುಪಿಎ (ಕಂಪಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

‘ಕುದುರೆಗಳನ್ನು ಈ ರೀತಿಯ ಲಾಯಗಳಲ್ಲಿ ಮುಂದುವರಿಸುವುದು ಕ್ರೌರ್ಯವಾಗಬಹುದು. ಎಡಬ್ಲ್ಯೂಬಿಐ ಮಾರ್ಗಸೂಚಿಗಳಿಗೆ ಬದ್ಧವಾಗಿಲ್ಲ. ಅವುಗಳನ್ನು ನೆಲಸಮಗೊಳಿಸಿ ದುರಸ್ತಿ ಮಾಡಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

‘ಶಿಫಾರಸು ಅನುಷ್ಠಾನಗೊಳಿಸಲು ಮೂರು ತೊಡಕುಗಳಿವೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶವಿದೆ. ದುರಸ್ತಿ ಕಾರ್ಯಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಿದೆ ಮತ್ತು ಹಣಕಾಸಿನ ನೆರವನ್ನು ಕೇಳಬೇಕಿದೆ’ ಎಂದು ಕ್ಲಬ್ ಪ್ರತಿಕ್ರಿಯೆ ಸಲ್ಲಿಸಿತು.

‘ಅಶ್ವಶಾಲೆಗಳು ಸದ್ಯಕ್ಕೆ ಸರಿಯಾಗುವ ಲಕ್ಷಣಗಳಿಲ್ಲ. ಈ ಎಲ್ಲ ಕಾರಣಗಳು ಕುದುರೆಗಳನ್ನು ಅಪಾಯಕ್ಕೆ ಒಡ್ಡುತ್ತಿವೆ’ ಎಂದು ತಿಳಿಸಿದ ಪೀಠ, ಏಪ್ರಿಲ್ 1ಕ್ಕೆ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.