ನೆಲಮಂಗಲ: ‘ಪಟ್ಟಣದಲ್ಲಿ ದಟ್ಟಣೆ ಹೆಚ್ಚಿರುವ ಪೇಟೆಬೀದಿಯ ಆಸುಪಾಸಿನಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಶೌಚಾಲಯವನ್ನು ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಿಸಲಾಗುವುದು’ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಪೇಟೆಬೀದಿ ಹಾಗೂ ಎಬಿನೇಜರ್ ಶಾಲೆ ರಸ್ತೆಗಳ ಡಾಂಬರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಎರಡೂ ರಸ್ತೆಗಳು ಗುಂಡಿಗಳಿಂದ ತುಂಬಿದ್ದವು. ಹಲವರು ಅಪಘಾತಕ್ಕೆ ಈಡಾಗಿದ್ದರು. ಈಗ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರ್ ಹಾಕಲಾಗುತ್ತಿದೆ. ಡಾಂಬರೀಕರಣ ಸಮಯದಲ್ಲಿ ಅಂಗಡಿಗಳನ್ನು ಮುಚ್ಚಿ ಸಹಕರಿಸುವುದಾಗಿ ವ್ಯಾಪಾರಸ್ಥರು ತಿಳಿಸಿದ್ದಾರೆ.

‘ಪೇಟೆ ಬೀದಿಯನ್ನು ₹47 ಲಕ್ಷ ವೆಚ್ಚದಲ್ಲಿ, ಎಬಿನೇಜರ್ ಶಾಲೆಯ ರಸ್ತೆಯನ್ನು ₹ 37 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ’ ಎಂದರು.

ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಉಪಾಧ್ಯಕ್ಷೆ ಸುಜಾತಾ ಮುನಿಯಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ, ಸದಸ್ಯರಾದ ಪುರುಷೋತ್ತಮ್, ಸುನೀಲ್ ಮೂಡ್, ಗಂಗಾಧರ್ ರಾವ್, ಕೃಪಾನಂದ್, ಪಿಳ್ಳಪ್ಪ, ಆನಂದ್, ರಾಮಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.