ಬೆಂಗಳೂರು: ಇಸ್ರೇಲ್ ಕಾನ್ಸಲ್ ಜನರಲ್ ಕಚೇರಿ ನಗರದಲ್ಲಿ ಬುಧವಾರ ಅಂತರರಾಷ್ಟ್ರೀಯ ಹತ್ಯಾಕಾಂಡದ ದಿನದ ಸ್ಮರಣೆಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸಲ್ ಜನರಲ್ ಮುಖ್ಯಸ್ಥ ಜೋನಾಥನ್ ಝಡ್ಕ ಮಾತನಾಡಿ, ದೇಷ, ಜನಾಂಗೀಯ ತಾರತಮ್ಯದಿಂದ ಮನುಕುಲಕ್ಕೆ ಹಾನಿಯೇ ಹೊರತು ಒಳಿತಾಗುವುದಿಲ್ಲ. ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯಲ್ಲಿ ನಡೆದ ಯಹೂದಿಗಳ ನರಮೇಧ ಈ ಪಾಠವನ್ನು ಜಗತ್ತಿಗೆ ಸಾರುತ್ತದೆ. ಭವಿಷ್ಯದಲ್ಲಿ ಎಂದೂ ಇಂತಹ ಸ್ಥಿತಿ ಬಾರದಂತೆ ಒಗ್ಗಟ್ಟಾಗಿ ಹೋರಾಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಅಮೆರಿಕ, ಯುಕೆ, ಜರ್ಮನಿ, ಫ್ರಾನ್ಸ್, ಸ್ವಿಡ್ಜರ್‌ಲ್ಯಾಂಡ್, ಜಪಾನ್ ಮುಂತಾದ
ರಾಷ್ಟ್ರಗಳ ರಾಯಭಾರಿ ಕಚೇರಿಗಳ ಮುಖ್ಯಸ್ಥರು. ವಿವಿಧ ಧರ್ಮಗಳ ಮುಖಂಡರು ಮೇಣದ ಬತ್ತಿ ಬೆಳಗಿದರು. ಹತ್ಯಾಕಾಂಡದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಯಹೂದಿ ಧರ್ಮ ಗುರು ಪ್ರಾರ್ಥನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.