ಬೆಂಗಳೂರು: ಪ್ರಧಾನಿ ಮೋದಿ ಅವರಿಗೆ ಭದ್ರತೆ ಒದಗಿಸುವ ಸಂಬಂಧ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪ್ರಶ್ನೆ ಕೇಳಿದ ಮಾಧ್ಯಮದವರ ವಿರುದ್ಧ ಹರಿಹಾಯ್ದರು.

ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಮೋದಿಯವರು ರಾಜ್ಯಕ್ಕೆ ಬರಲಿದ್ದಾರೆ. ಅವರ ಭದ್ರತೆ ಬಗ್ಗೆ ಡಿಜಿ–ಐಜಿಗೆ ಸುತ್ತೋಲೆ ಬಂದಿದೆ. ಆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು, ಡಿಜಿ–ಐಜಿ ಕೊಠಡಿಗೆ ಮಂಗಳವಾರ ಬೆಳಿಗ್ಗೆಹೋಗಿದ್ದರು.

ಅವರನ್ನು ಕಂಡು ಗರಂ ಆದ ಡಿಜಿ–ಐಜಿ, ‘ನಿಮ್ಮನ್ನು ಒಳಗೆ ಕಳುಹಿಸಿದವರು ಯಾರು? ನೀವೆಲ್ಲ ಇಲ್ಲಿಗೆ ಏಕೆ ಬರಬೇಕು. ನಮ್ಮನ್ನು ಕೇಳಲು ನೀವು ಯಾರು? ನಾವೇನು ಹೇಳುತ್ತೇವೋ ಅದನ್ನಷ್ಟೇ ಬರೆದುಕೊಂಡು ಹೋಗಬೇಕಷ್ಟೇ’ ಎಂದು ಏರು ಧ್ವನಿಯಲ್ಲಿ ಮಾತನಾಡಿದರು. ತಮ್ಮ ಸಿಬ್ಬಂದಿಯನ್ನು ಕರೆದು, ‘ಸೆಂಡ್ ದೆಮ್ ಔಟ್’ ಎಂದು ಮಾಧ್ಯಮದವರನ್ನು ಹೊರಗೆ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.