‘ಬಾಡಿಗೆ ಹಣದಿಂದ ನಿರ್ವಹಣೆ ಅಸಾಧ್ಯ’
‘ಸರ್ಕಾರಿ ರಂಗಮಂದಿರಗಳಿಗೆ ರಾಜ್ಯದಲ್ಲಿ ಅತೀ ಕಡಿಮೆ ಬಾಡಿಗೆ ನಿಗದಿಪಡಿಸಲಾಗಿದೆ. ಇದರಿಂದಾಗಿಯೇ ಸಂಘ–ಸಂಸ್ಥೆಗಳು ರವೀಂದ್ರ ಕಲಾಕ್ಷೇತ್ರ ಸೇರಿ ವಿವಿಧ ರಂಗಮಂದಿರಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಹೆಚ್ಚಿನ ಆಸಕ್ತಿ ತೋರುತ್ತಿವೆ. ವಿದ್ಯುತ್ ಬಿಲ್ ಸಿಬ್ಬಂದಿ ವೇತನ ನಿರ್ವಹಣೆ ಸೇರಿ ವಿವಿಧ ವೆಚ್ಚಗಳು ಹೆಚ್ಚುತ್ತಿವೆ. ಇಲಾಖೆಯೇ ಈ ಹಣವನ್ನು ಭರಿಸುತ್ತದೆ. ಬಾಡಿಗೆ ಹಣದಿಂದಲೇ ಸರ್ಕಾರಿ ರಂಗಮಂದಿರಗಳ ನಿರ್ವಹಣೆ ಸಾಧ್ಯವಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.