ಬೆಂಗಳೂರು: ‘ದೇಶದಲ್ಲಿ ಸುಮಾರು 46 ಲಕ್ಷ ಜನ ಅಂಧತ್ವ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹವರಿಗೆ ದೃಷ್ಟಿ ಒದಗಿಸಲು ನೇತ್ರದಾನದ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು’ ಎಂದು ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್ ಮನವಿ ಮಾಡಿಕೊಂಡಿದೆ.

ನೇತ್ರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬ್ಯಾಂಕ್, ‘ಜಗತ್ತಿನಲ್ಲಿ ಅಂಧತ್ವ ಸಮಸ್ಯೆ ಎದುರಿಸುತ್ತಿರುವ ಒಟ್ಟು ಜನರಲ್ಲಿ ಅರ್ಧಕ್ಕಿಂತ ಅಧಿಕ ಮಂದಿ ಭಾರತೀಯರೇ ಆಗಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 25 ಸಾವಿರ ಅಂಧತ್ವ ಪ್ರಕರಣ ಹೊಸದಾಗಿ ಸೇರ್ಪಡೆಯಾಗುತ್ತಿದೆ. ನೇತ್ರ ದಾನ ಮಾಡುವವರು ಹಾಗೂ ಅಗತ್ಯ ಇರುವವರ ನಡುವೆ ದೊಡ್ಡ ಅಂತರವಿದೆ. ಇದಕ್ಕೆ ಜಾಗೃತಿ ಕೊರತೆಯೇ ಪ್ರಮುಖ ಕಾರಣ’ ಎಂದು ಬ್ಯಾಂಕಿನ ವೈದ್ಯಕೀಯ ನಿರ್ದೇಶಕಿ ಡಾ. ರೇಖಾ ಧ್ಯಾನಚಂದ್ ತಿಳಿಸಿದ್ದಾರೆ.

‘ಕಣ್ಣಿಗೆ ಗಾಯವಾಗುವಿಕೆ, ಅಪಘಾತ, ಜೀವಸತ್ವದ ಕೊರತೆ, ಆನುವಂಶಿಕ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ಕೆಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ನೇತ್ರವನ್ನು ದಾನ ಮಾಡಿದಲ್ಲಿ ಸಾವಿನಲ್ಲಿಯೂ ಸಾರ್ಥಕತೆ ಕಾಣಲು ಸಾಧ್ಯ. ಹಾಗಾಗಿ, ಮರಣಾನಂತರ ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಕೈಗೊಳ್ಳಬೇಕು. ಆಗ ‘ಕಾರ್ನಿಯಲ್’ ಅಂಧತ್ವದಿಂದ ಪಾರು ಮಾಡಲು ಸಾಧ್ಯ. ಈಗಾಗಲೇ ನೇತ್ರ ದಾನ ಮಾಡಿದವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

‘ಆರೋಗ್ಯಕರ ಕಣ್ಣುಗಳನ್ನು ಹೊಂದಲು ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ಪಡೆಯದೆ ಕಣ್ಣಿಗೆ ಯಾವುದೇ ಔಷಧವನ್ನು ಹಾಕಬಾರದು. ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿರುವವರು, 40 ವರ್ಷಗಳು ಮೇಲ್ಪಟ್ಟವರೂ ಕಣ್ಣಿನ ಪರೀಕ್ಷೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದ್ದಾರೆ.

‘ವ್ಯಕ್ತಿ ಮರಣ ಹೊಂದಿದ 6 ಗಂಟೆಯೊಳಗೆ ನೇತ್ರವನ್ನು ದಾನವಾಗಿ ಪಡೆಯಲಾಗುತ್ತದೆ. ಈ ಪ್ರಕ್ರಿಯೆ ಗರಿಷ್ಠ 20 ನಿಮಿಷಗಳಲ್ಲಿ ನಡೆಯಲಿದೆ. ಯಾವುದೇ ಸ್ಥಳದಲ್ಲಿ ನೇತ್ರದಾನಕ್ಕೆ ಸಂಪರ್ಕಿಸಬಹುದು. ನಮ್ಮ ತಂಡವು 24X7 ಕಾರ್ಯನಿರ್ವಹಿಸಲಿದೆ. ಎಲ್ಲರೂ ನೇತ್ರದಾನ ಮಾಡಬಹುದಾಗಿದೆ. ಒಂದು ವೇಳೆ ನೇತ್ರದಾನಕ್ಕೆ ಹೆಸರು ನೋಂದಾಯಿಸದಿದ್ದರೂ ಕುಟುಂಬದ ಸದಸ್ಯರು ಇಚ್ಛಿಸಿದಲ್ಲಿ ಕಣ್ಣುಗಳನ್ನು ದಾನವಾಗಿ ಪಡೆಯಬಹುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್: 9740556666

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.