ಕೆಂಗೇರಿ: ‘ಶಾಸಕ ಎಸ್.ಟಿ.ಸೋಮಶೇಖರ್ ಅವರು ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಾಧಿಸಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ. ಚುನಾವಣಾ ಫಲಿತಾಂಶ ಅವರ ಭ್ರಮೆಯನ್ನು ಬಡಿದೋಡಿಸಲಿದೆ’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

ನಾಗರಬಾವಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ನಂಬಿ ಹೊರಟಿರುವ ಎಸ್.ಟಿ.ಸೋಮಶೇಖರ್ ಅವರಿಗೆ ಶೀಘ್ರದಲ್ಲೇ ಭ್ರಮನಿರಸನವಾಗಲಿದೆ’ ಎಂದರು.

‘ಮೋದಿ ನಾಯಕತ್ವದಲ್ಲಿ ದೇಶದ ಹಿರಿಮೆ ಇಮ್ಮಡಿಗೊಂಡಿದೆ. ಹಾಗಾಗಿಯೇ ದೇವೇಗೌಡರು ಮೋದಿ ಅವರ ಪುನರಾಯ್ಕೆ ಬಯಸಿ ಬೆಂಬಲ ಘೋಷಿಸಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗೊತ್ತಿ ಎನ್‌ಡಿಎ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್– ಬಿಜೆಪಿ ಮೈತ್ರಿಯಿಂದ ರಾಜ್ಯದಲ್ಲಿ ಎನ್‌ಡಿಎ ಬಲ ದ್ವಿಗುಣಗೊಂಡಿದೆ. ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಜೆಡಿಎಸ್ ಕೂಡ ಮತ ಬ್ಯಾಂಕ್ ಹೊಂದಿದೆ. ಆ ಭಾಗದ ಕಾರ್ಯಕರ್ತರು ಕಮಲಕ್ಕೆ ಸಹಕಾರ ನೀಡಿದರೆ ಗೆಲುವಿನೊಂದಿಗೆ ಬಹುಮತದ ಅಂತರವು ಹೆಚ್ಚಾಗಲಿದೆ’ ಎಂದರು.

ಶಾಸಕ ಗೋಪಾಲಯ್ಯ, ಮುಖಂಡರಾದ ಹರೀಶ್, ಆರ್.ಪಿ.ಪ್ರಕಾಶ್, ಅನಿಲ್ ಚಳಗೇರಿ, ರಂಗರಾಜು, ಸಿ.ಎಂ.ಮಾರೇಗೌಡ, ರ.ಆಂಜನಪ್ಪ, ಜಂಗಮ ರಮೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.