ಬೆಂಗಳೂರು: ಸಿ.ವಿ.ರಾಮನ್ ನಗರ ನಿವಾಸಿ ಶಿವರಾಮಕೃಷ್ಣ ಶಾಸ್ತ್ರಿ ಅವರು ತಮ್ಮ 86ನೇ ವಯಸ್ಸಿನಲ್ಲೂ ಉತ್ಸಾಹದಿಂದ ಮತಗಟ್ಟೆಗೆ ಬಂದು 20ನೇ ಬಾರಿ ಮತದಾನ ಮಾಡಿದರು.

ಹಿರಿಯ ನಾಗರಿಕರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶವಿತ್ತು. ಆದರೆ, ಮತಗಟ್ಟೆಯಲ್ಲೇ ಮತದಾನ ಮಾಡಬೇಕೆಂದು ಶಿವರಾಮಕೃಷ್ಣ ಶಾಸ್ತ್ರಿ ಅವರು ತೀರ್ಮಾನಿಸಿದ್ದರು. ಹೀಗಾಗಿ, ಮಗ ಹಾಗೂ ಸೊಸೆ ಜೊತೆ, ಡಿಆರ್‌ಡಿಒ ಕೇಂದ್ರಿಯ ವಿದ್ಯಾಲಯದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು. ಅವರನ್ನು ಪೊಲೀಸರು, ವ್ಹೀಲ್ ಚೇರ್‌ನಲ್ಲಿ ಮತಗಟ್ಟೆಗೆ ಕರೆದೊಯ್ದು ಮತ ಚಲಾಯಿಸಲು ಅನುಕೂಲಮಾಡಿ ಕೊಟ್ಟರು.

'ಮತದಾನ ನಮ್ಮ ಹಕ್ಕು. ಮನೆಯಲ್ಲಿ ಮತದಾನ ಮಾಡಿದರೆ ಅದರ ಮಹತ್ವ ತಿಳಿಯುವುದಿಲ್ಲ. ಜನರೂ ಭೇಟಿಯಾಗುವುದಿಲ್ಲ. ಅದಕ್ಕೆ ಮತಗಟ್ಟೆಗೆ ಬಂದಿದ್ದೇನೆ. ಇಲ್ಲಿ ಎಲ್ಲರೂ ಭೇಟಿಯಾಗುತ್ತಾರೆ. ಖುದ್ದು ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ ಮನಸ್ಸಿಗೆ ಖುಷಿ' ಎಂದು ಶಿವರಾಮಕೃಷ್ಣ ಶಾಸ್ತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.