ರಾಜರಾಜೇಶ್ವರಿ ನಗರ: ಒಂದೆಡೆ ರಾಶಿ ಪೂಜೆ, ಇನ್ನೊಂದೆಡೆ ರಾಸುಗಳ ಪೂಜೆ, ಮೆರವಣಿಗೆ, ನೇಗಿಲು, ಕೂರಿಗೆಯಂತಹ ಕೃಷಿ ಉಪಕರಣಗಳ ಪ್ರದರ್ಶನ, ಕಡಲೆಕಾಯಿ, ಅವರೆಕಾಯಿ, ಗೆಣಸು, ಎಳ್ಳು–ಬೆಲ್ಲ ಹಂಚುವ ಸಂಭ್ರಮ...

ರಾಜರಾಜೇಶ್ವರಿ ನಗರ ವ್ಯಾಪ್ತಿಯ ಮಾಳಗಾಲದಲ್ಲಿ ಕಾಂಗ್ರೆಸ್ ಮುಖಂಡ ಎನ್. ಶೇಖರ್ ಅವರು ಸೋಮವಾರ ಹಮ್ಮಿಕೊಂಡಿದ್ದ ‘ಸಂಕ್ರಾಂತಿ ಉತ್ಸವ’ದಲ್ಲಿ ಕಂಡು ಬಂದ ಸಂಭ್ರಮದ ದೃಶ್ಯಗಳಿವು.

ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಅವರು ಧಾನ್ಯಗಳ ರಾಶಿಗೆ, ಗೋವುಗಳು ಹಾಗೂ ಕೃಷಿ ಪರಕರಗಳಿಗೆ ಪೂಜೆ ನೆರವೇರಿಸುವ ಮೂಲಕ ಸಂಕ್ರಾಂತಿ ಉತ್ಸವ ಹಾಗೂ ಮೆರವಣಿಗೆಗೆ ಚಾಲನೆ ನೀಡಿದರು. ಉತ್ಸವಕ್ಕೆ ಬಂದಿದ್ದವರಿಗೆ ಕಡಲೆಕಾಯಿ, ಅವರೆಕಾಯಿ, ಗೆಣಸು, ಎಳ್ಳು, ಬೆಲ್ಲ, ಕಬ್ಬಿನ ಜಲ್ಲೆ ವಿತರಿಸಿದರು.

ಕಾಂಗ್ರೆಸ್ ಮುಖಂಡ ಕೊಟ್ಟಿಗೆಪಾಳ್ಯ ಎನ್.ಶೇಖರ್ ಮಾತನಾಡಿ, ‘ಗ್ರಾಮೀಣ ಸೊಗಡು, ಜನಪದ ಕಲೆಗಳನ್ನು ನಗರದ ನಾಗರಿಕರಿಗೆ, ವಿಶೇಷವಾಗಿ ಯುವ ಸಮೂಹಕ್ಕೆ ಪರಿಚಯಿಸಲು ಸಂಕ್ರಾಂತಿ ಉತ್ಸವ ಆಚರಿಸಲಾಗುತ್ತಿದೆ’ ಎಂದರು.

ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಅವರು ಜನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, 'ಗ್ರಾಮೀಣ ಸೊಗಡನ್ನು ಪಟ್ಟಣದ ನಾಗರಿಕರಿಗೆ ಪರಿಚಯಸುತ್ತಿರುವ ಕೆಲಸ ಶ್ಲಾಘನೀಯ‘ ಎಂದರು. ’ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ಇಂದಿಗೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇನೆ. ಅನ್ನದಾತನೇ ದೇಶದ ಶಕ್ತಿ’ ಎಂದರು.

ಕೆಪಿಸಿಸಿ ಸದಸ್ಯ ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಜಿ.ಮೋಹನ್ ಕುಮಾರ್, ಮುಖಂಡರಾದ ಕೃಷ್ಣಮೂರ್ತಿ, ಕೊಡ್ಲಿ ಮಂಜುನಾಥ್, ರಾಂಪುರ ನಾಗೇಶ್, ಅಮರನಾಥ್, ಲಗ್ಗೆರೆ ರಮೇಶ್ ಗೌಡ, ಜೆ.ದಿನೇಶ್ ಇದ್ದರು.

ಉತ್ಸವದಲ್ಲಿ ಮಾಳಗಾಲ, ಕೊಟ್ಟಿಗೆಪಾಳ್ಯ, ಸಜ್ಜೆಪಾಳ್ಯ, ಸುಂಕದಕಟ್ಟೆ, ಶ್ರೀನಿವಾಸ ನಗರ, ಮದ್ದೂರಮ್ಮ ಬಡಾವಣೆ, ಸಲ್ಲಾಪುರದಮ್ಮ ಬಡಾವಣೆ ನಾಗರಿಕರಿಗೆ ಸಂಕ್ರಾಂತಿ ಉಡುಗೊರೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.