ನೆಲಮಂಗಲ: ಹೆರಿಗೆ ಮತ್ತು ಮಾಸಿಕ ಸ್ರಾವ (ಮುಟ್ಟು) ಸಹಜ ಕ್ರಿಯೆಗಳು. ಆದರೆ, ವಿಶೇಷ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ವೈದ್ಯರ ನೆರವಿನಿಂದ ಮುಟ್ಟು ಮುಂದು ಹಾಕುವ ಮೌಢ್ಯದಿಂದ ವಿದ್ಯಾವಂತ ಮಹಿಳೆಯರು ಹೊರತಾಗಿಲ್ಲ’ ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಬೇಸರ ವ್ಯಕ್ತಪಡಿಸಿದರು.

‘ಮತ್ತೆ ಕಲ್ಯಾಣ’ ಸಹಮತ ವೇದಿಕೆ ಪಟ್ಟಣದ ಪವಾಡಶ್ರೀ ಬಸವಣ್ಣದೇವರ ಮಠದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.

ಶರಣ ತತ್ವದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ‘ದಲಿತ ಚಳವಳಿಯಿಂದ ಅರಳಿದ ಡಾ.ಎಲ್.ಹನುಮಂತಯ್ಯ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಶರಣರು 12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಶ್ರಮಿಸಿದ್ದರು’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಇದ್ದರು. ಬಸವಣ್ಣದೇವರ ಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.