ಬೆಂಗಳೂರು: ಮೇಖ್ರಿ ವೃತ್ತದ ಕಳೆಸೇತುವೆ ಬಳಿ ಭಾನುವಾರ (ಫೆ. 9) ಮಧ್ಯಾಹ್ನ ಸಂಭವಿಸಿದ್ದ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಮಗ ಮೊಹ್ಮದ್ ನಲಪಾಡ್ ಬುಧವಾರವಿಚಾರಣೆಗೆ ಹಾಜರಾದರು.

ಪ್ರಕರಣದ ತನಿಖಾಧಿಕಾರಿ ಬಿ.ಪಿ. ನಾಗರಾಜು ಅವರು ನಲಪಾಡ್ ಅವರ ಹೇಳಿಕೆಯನ್ನು ದಾಖಲಿಕೊಂಡರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನಲಪಾಡ್ ಅವರಿಗೆ ಮಂಗಳವಾರ ನೋಟಿಸ್ ನೀಡಿದ್ದರು.

ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಮಾತನಾಡಿ, ’ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ನಲಪಾಡ್ ಅವರನ್ನು ಬಂಧಿಸಿ, ಬಾಂಡ್ ಬರೆಸಿಕೊಂಡು ಠಾಣಾ ಜಾಮೀನು (ಸ್ಟೇಷನ್ ಬೇಲ್) ನೀಡಿದ್ದೇವೆ’ ಎಂದು ತಿಳಿಸಿದರು.

‘ನಲಪಾಡ್ ಕಾರು ಚಲಾಯಿಸಿಲ್ಲ. ಬೇರೊಬ್ಬ ವ್ಯಕ್ತಿ ಕಾರು ಚಲಾಯಿಸುತ್ತಿದ್ದರು. ಅವರ ವಿರುದ್ಧ ಷಡ್ಯಂತ್ರರೂಪಿಸಲಾಗಿದೆ’ ಎಂದು ನಲಪಾಡ್ ಪರ ವಕೀಲ ಉಸ್ಮಾನ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.