ಬೆಂಗಳೂರು: ‘ರಾಜಕೀಯ ನಾಯಕರ ಸುಳ್ಳು ಹೇಳಿಕೆಗಳಿಗೆ ಎಂದಿಗೂ ಕಿವಿಗೊಡಬಾರದು. ಅವರು ಯಾವ ಸಮಯಕ್ಕೆ ಹೇಗೆ ಬೇಕಾದರೂ ವರ್ತಿಸುವ ನಾಟಕಕಾರರು’ ಎಂದು ಚಿಂತಕ ಡಾ.ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.

ಭಾರತ ಯಾತ್ರಾ ಕೇಂದ್ರವು ಇಲ್ಲಿ ಶನಿವಾರ ಆಯೋಜಿಸಿದ್ದ ಸಮಾಜವಾದಿ ಹರಿಕಾರ ಡಾ.ರಾಮಮನೋಹರ ಲೋಹಿಯಾ ಜನ್ಮದಿನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಟಿ.ವಿ. ಚರ್ಚೆ ವೇಳೆ ಮೂರು ಪಕ್ಷಗಳ ನಾಯಕರು ಪರಸ್ಪರ ಕಚ್ಚಾಡುತ್ತಾರೆ. ನಮ್ಮೆದುರಿಗೆ ಆಡುವ ನಾಟಕವದು. ಅದನ್ನರಿಯದೆ ಅವರಂತೆ ನಾವೂ ವರ್ತಿಸುವುದು ದುರಂತ. ಸಮಾಜ ಪರಿವರ್ತನೆಯಾಗಲು ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರ ಚಿಂತನೆಗಳಿಗೆ ಮರಳಬೇಕು’ ಎಂದು ಸಲಹೆ ನೀಡಿದರು.

ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮತ್ತು ಡಾ.ರಾಮಮನೋಹರ ಲೋಹಿಯಾ ಸಮತಾ ವಿಚಾರ ಟ್ರಸ್ಟ್ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.