ಬೆಂಗಳೂರು: ಕ್ರೈಸ್ಟ್ ವಿಶ್ವವಿದ್ಯಾಲಯದ ಎನ್‌ಸಿಸಿ ಘಟಕವು ಉತ್ತಮ ಸಾಧನೆ ಮಾಡಿದ್ದು, ಸತತ ಆರನೇ ಬಾರಿಗೆ ಕರ್ನಾಟಕ ಹಾಗೂ ಗೋವಾ ವಿಭಾಗದಲ್ಲಿ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ ಪಡೆದುಕೊಂಡಿದೆ.

1969ರಲ್ಲಿ ಸಂಸ್ಥೆ ಸ್ಥಾಪನೆಯಾಗಿದೆ. ಎನ್‌ಸಿಸಿ ಘಟಕ ಆರಂಭವಾದ ದಿನದಿಂದಲೂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಅಲ್ಲದೇ ಇದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ 100ಕ್ಕೂ ಅಧಿಕ ಮಂದಿ ಭಾರತೀಯ ಸೇನೆಯಲ್ಲಿ ಕರ್ತವ್ಯ ಸೇವೆ ಸಲ್ಲಿಸುತ್ತಿದ್ದಾರೆ. 2022–2023ನೇ ಸಾಲಿನಲ್ಲಿ ಎನ್‌ಸಿಸಿಯ ಎಂಟು ಕೆಡೆಟ್‌ಗಳು ಸೇನೆಗೆ ಆಯ್ಕೆಗೊಂಡಿದ್ದರು.

ಕ್ರೈಸ್ಟ್ ವಿಶ್ವವಿದ್ಯಾಲಯದ ಎನ್‌ಸಿಸಿ ಘಟಕವು ಅಗ್ರ ಸ್ಥಾನ ಉಳಿಸಿಕೊಳ್ಳಲು ಒಟ್ಟಾರೆ ಉತ್ತಮ ಪ್ರದರ್ಶನ ತೋರಿತ್ತು. ರಾಷ್ಟ್ರ ನಿರ್ಮಾಣ ಚಟುವಟಿಕೆ, ಸಾಮಾಜಿಕ ಸೇವೆ, ಸಾಹಸ ಚಟುಟಿಕೆ ಹಾಗೂ ಎನ್‌ಸಿಸಿ ಶಿಬಿರಗಳನ್ನು ಆಧರಿಸಿ ಈ ಪ್ರಶಸ್ತಿ ಕೊಡಲಾಗಿದೆ.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಪಥಸಂಚಲನದಲ್ಲಿ ಭಾಗವಹಿಸಿದ್ದ ಎನ್‌ಸಿಸಿ ಕೆಡೆಟ್‌ಗಳು ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು. ವಿವಿಯ ಪುಣ್ಯಾ ಪೊನ್ನಮ್ಮ ಅವರು ಪಥಸಂಚಲನದಲ್ಲಿ ಬಾಲಕಿಯರ ತಂಡ ಮುನ್ನಡೆಸಿದ್ದರು. ಅಲ್ಲದೇ ಇತರರು ಎನ್‌ಸಿಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.