ಬೆಂಗಳೂರು: ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಶೇ 88ರಷ್ಟು ಸವಾರರು ಹೆಲ್ಮೆಟ್ ಧರಿಸುತ್ತಿದ್ದಾರೆ. ಆದರೆ, ಸರಿಯಾಗಿ ಹೆಲ್ಮೆಟ್ ಧರಿಸುವವರ ಪ್ರಮಾಣ ಶೇ 34ರಷ್ಟು ಮಾತ್ರ ಎಂದು ‘ರಸ್ತೆ ಸುರಕ್ಷತಾ ಅಪಾಯದ ಅಂಶಗಳು-2022’ ವರದಿ ಬಹಿರಂಗಪಡಿಸಿದೆ.

ಜಾನ್ಸ್ ಹಾಪ್ಕಿನ್ಸ್ ಇಂಟರ್ ನ್ಯಾಷನಲ್ ಇಂಜೂರಿ ರಿಸರ್ಚ್ ಘಟಕ (ಜೆಎಚ್‌ಐಐಆರ್‌ಯು) ಮತ್ತು ನಿಮ್ಹಾನ್ಸ್ ಸಂಸ್ಥೆ ಈ ವರದಿಯನ್ನು ಸಿದ್ಧಪಡಿಸಿದೆ. ಬ್ಲೂಮ್ ಬರ್ಗ್ ಫಿಲಾಂತ್ರೋಫಿಸ್ ಇನಿಷಿಯೇಟಿವ್ ಫಾರ್ ಗ್ಲೋಬಲ್ ರೋಡ್ ಸೇಫ್ಟಿ (ಬಿಐಜಿಆರ್‌ಎಸ್) ನಡೆಸುತ್ತಿರುವ ಚಟುವಟಿಕೆಯ ಭಾಗವಾಗಿ ಬೆಂಗಳೂರು ಮೆಟ್ರೋಪಾಲಿಟನ್ ವಲಯದಲ್ಲಿ 2021ರ ನವೆಂಬರ್‌ನಿಂದ 2022ರ ಅಕ್ಟೋಬರ್‌ವರೆಗೆ ಪರಿಶೀಲಿಸಿ ಉಲ್ಲೇಖಿಸಲಾಗಿದೆ.

18 ವರ್ಷದೊಳಗಿನ ಸವಾರರಲ್ಲಿ ಶೇ 8ರಷ್ಟು ಮಂದಿಯಷ್ಟೇ ಸರಿಯಾಗಿ ಹೆಲ್ಮೆಟ್ ಧರಿಸುತ್ತಾರೆ. ಹಿಂಬದಿ ಸವಾರರಲ್ಲಿ ಶೇ 16ರಷ್ಟು ಜನರು ಸರಿಯಾಗಿ ಧರಿಸಿದ್ದರು. ಉಳಿದವರು ಅರ್ಧ ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಹೀಗೆ ಸುರಕ್ಷಿತವಲ್ಲದವುಗಳನ್ನೇ ಬಳಸಿದ್ದಾರೆ ಎಂದು ವರದಿ ತಿಳಿಸಿದೆ.

ಪೊಲೀಸ್ ಇಲಾಖೆಯ ಪ್ರಕಾರ 2020-21ನೇ ಸಾಲಿನಲ್ಲಿ ರಸ್ತೆ ಅಪಘಾತಗಳಿಂದ 10,038 ಜನರು ಮೃತಪಟ್ಟಿದ್ದರು. ಅದರಲ್ಲಿ 9,101 ಜನರ ಮರಣಕ್ಕೆ ಅತಿ ವೇಗವೇ ಕಾರಣವಾಗಿತ್ತು.

ಕಾರುಗಳಲ್ಲಿ ಶೇ 66ರಷ್ಟು ಚಾಲಕರು ಮತ್ತು ಶೇ 12ರಷ್ಟು ಸಹಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿದ್ದರು. ಮಕ್ಕಳ ನಿಯಂತ್ರಕವನ್ನು ಶೇ 2ರಷ್ಟು ಮಾತ್ರ ಬಳಕೆ ಮಾಡಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ವಿವರ ನೀಡಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ವರದಿಯನ್ನು ಬಿಡುಗಡೆ ಮಾಡಿದರು. ಜೆಎಚ್‌ಐಐಆರ್‌ಯುನ ನಿಷಿತ್ ಪಟೇಲ್, ನಿಮ್ಹಾನ್ಸ್ ಹೆಚ್ಚುವರಿ ಪ್ರಾಚಾರ್ಯ ಡಾ. ಗೌತಮ್ ಸುಕುಮಾರ್ ವರದಿಯ ವಿವರ ನೀಡಿದರು. ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಂಚಾರ ಮತ್ತು ಸುರಕ್ಷತೆ ಆಯುಕ್ತ ಅಲೋಕ್ ಕುಮಾರ್, ಐಜಿಪಿ ಬಿ.ಆರ್. ರವಿಕಾಂತೇ ಗೌಡ ಇದ್ದರು.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.