ಬೆಂಗಳೂರು: ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾವನ್ನು ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನೇತಾಜಿ ನಗರದ ನಿವಾಸಿ ಪ್ರವೀಣ್ (32) ಬಂಧಿತ ವ್ಯಕ್ತಿ. ಸಿನಿಮಾದ ನಿರ್ಮಾಪಕಿ ಸ್ವಪ್ನಕೃಷ್ಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಾಗಡಿ ರಸ್ತೆಯ 11ನೇ ಕ್ರಾಸ್ನಲ್ಲಿ ಚನ್ನಕೇಶವ ಎಂಟರ್ ಪ್ರೈಸಸ್ ಹೆಸರಿನಲ್ಲಿ ಮೊಬೈಲ್ ಸರ್ವೀಸ್ ಸೆಂಟರ್ ನಡೆಸುತ್ತಿರುವ ಪ್ರವೀಣ್, ಸಿನಿಮಾವನ್ನು ಡೌನ್ಲೋಡ್ ಮಾಡಿ ಪ್ರತಿಯನ್ನು ₹ 10ಕ್ಕೆ ಮಾರಾಟ ಮಾಡುತ್ತಿದ್ದ.

‘ಸಿನಿಮಾವನ್ನು ಆರೋಪಿ ಡೌನ್ಲೋಡ್ ಮಾಡಿ ಕೊಡುತ್ತಿರುವುದು ಮೊಬೈಲ್ ಸರ್ವೀಸ್ ಸೆಂಟರ್ ಮೇಲೆ ದಾಳಿ ನಡೆಸಿದಾಗ ಗೊತ್ತಾಗಿದೆ. ತಮಿಳು ರಾಕರ್ಸ್ ವೆಬ್ಸೈಟ್ನಿಂದ ಸಿನಿಮಾವನ್ನು ಆರೋಪಿ ಪೈರಸಿ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಸಿನಿಮಾವನ್ನು ಪೈರಸಿ ಮಾಡಿರುವ ಬಗ್ಗೆ ಸ್ವಪ್ನಕೃಷ್ಣ ಅವರು ಸೈಬರ್ ಕ್ರೈಂ ಠಾಣೆಗೆ ವಾರದ ಹಿಂದೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.