ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜಲ ಸಂಜೀವಿನಿ ಕಾರ್ಯಕ್ರಮ ಮತ್ತು ಜಲಶಕ್ತಿ ಅಭಿಯಾನದಡಿ ಅಂತರರಾಷ್ಟ್ರೀಯ ಜೀವ ವೈವಿಧ್ಯತಾ ದಿನದ ಪ್ರಯುಕ್ತ ‘ಪಂಚ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮೇ 22 ರಂದು ಅಂತರರಾಷ್ಟ್ರೀಯ ಜೀವ ವೈವಿಧ್ಯತಾ ದಿನದಂದು ಪಂಚ ಅಭಿಯಾನಗಳಿಗೆ ಚಾಲನೆ ನೀಡಲಾಗಿದೆ. ಇವುಗಳನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾಗುವುದು. ಈ ಐದೂ ಅಭಿಯಾನಗಳು ನೇರವಾಗಿ ಪರಿಸರ ಸಂರಕ್ಷಣೆ, ಹಸಿರೀಕರಣ ಮತ್ತು ಪ್ರದೇಶಾಭಿವೃದ್ಧಿಗೆ ಸಂಬಂಧಿಸಿವೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ 'ಮಿಷನ್ ಲೈಫ್' ಅಡಿ ನರೇಗಾ ಯೋಜನೆಯನ್ನು ಪುನರ್‌ರೂಪಿಸಿ ಜಲಸಂಜೀವಿನಿ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ಅಲ್ಲದೇ, ಅಮರತ ಸರೋವರ ಯೋಜನೆಯಡಿ ಪ್ರಾಯೋಗಿಕವಾಗಿ 100 ಕೆರೆಗಳನ್ನು ಆಯ್ಕೆ ಮಾಡಿದ್ದು, ಅವುಗಳನ್ನು ಪರಿಸರ ಸ್ನೇಹಿ ಕೆರೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.

ಪಂಚ ಅಭಿಯಾನ ಕಾರ್ಯಕ್ರಮಗಳು ಹೀಗಿವೆ

ವಿಪತ್ತು ನಿರ್ವಹಣೆ ಹಾಗೂ ಗೋಮಾಳ ಅಭಿವೃದ್ಧಿ ಅಭಿಯಾನ

ಕೋಟಿ ವೃಕ್ಷ ಅಭಿಯಾನ (ಹಸಿರೀಕರಣ)

ನಿಷ್ಕ್ರಿಯ ಕೊಳವೆ ಬಾವಿ ಪುನಶ್ಚೇತನ ಅಭಿಯಾನ

ಹಸಿರು ಸರೋವರ ಅಭಿಯಾನ

ಜೈವಿಕ ಅನಿಲ ಅಭಿಯಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.