ಬೆಂಗಳೂರು: ಕೋವಿಡ್ ಕರ್ಫ್ಯೂನಿಂದ ಸಂಕಷ್ಟದಲ್ಲಿರುವವರು ಮತ್ತು ಕೋವಿಡ್ ರೋಗಿಗಳ ಸಂಬಂಧಿಕರಿಗೆ ನಗರದ ಪಿಇಎಸ್ ವಿಶ್ವವಿದ್ಯಾಲಯವು ಉಚಿತವಾಗಿ ಆಹಾರ ವಿತರಿಸುತ್ತಿದೆ.

ಕೋವಿಡ್ ಕರ್ಫ್ಯೂ ಜಾರಿಯಾಗಿರುವ ದಿನದಿಂದಲೇ ವಿಶ್ವವಿದ್ಯಾಲಯವು ಈ ಕಾರ್ಯ ಮಾಡುತ್ತಿದೆ. ಜಯದೇವ, ವಿಕ್ಟೋರಿಯಾ, ವಾಣಿವಿಲಾಸ, ಸಂಜಯ್ ಗಾಂದಿ, ನಿಮ್ಹಾನ್ಸ್ ಹಾಗೂ ರಾಜರಾಜೇಶ್ವರಿ ಆಸ್ಪತ್ರೆಗಳು ಸೇರಿದಂತೆ ನಗರದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಸಂಬಂಧಿಕರಿಗೆ ಆಯಾ ಆಸ್ಪತ್ರೆಗಳ ಆವರಣದಲ್ಲಿಯೇ ಬಿಸಿ ಊಟ ವಿತರಿಸುತ್ತಿದೆ.

‘ಶನಿವಾರದವರೆಗೆ 3500 ಜನರಿಗೆ ಬಿಸಿಯೂಟ ವಿತರಿಸಲಾಗಿದೆ. ಕರ್ಫ್ಯೂ ಜಾರಿಯಲ್ಲಿರುವವರೆಗೆ ಈ ಕಾರ್ಯ ಮುಂದುವರಿಯಲಿದೆ’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.