ಬೆಂಗಳೂರು: ‘ಇತ್ತೀಚಿನ ಸಿನಿಮಾ ಹಾಡುಗಳನ್ನು ಯಾವ ರೀತಿಯಲ್ಲೂ ಸಾಹಿತ್ಯ ಎಂದು ಪರಿಗಣಿಸಲು ಆಗುವುದಿಲ್ಲ. ಅವು ಅರ್ಥಹೀನ ರಚನೆಗಳು’ ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡ ಜನಶಕ್ತಿ ಕೇಂದ್ರದಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ಕಾವ್ಯ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ನಾಗ ಐತಾಳ್ ಮಾತನಾಡಿ, ‘ಬೆಂಗಳೂರಿನಲ್ಲಿ ಯುವ ಪೀಳಿಗೆಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿರುವುದು ಬೇಸರದ ಸಂಗತಿ. ಕನ್ನಡ ಭಾಷೆಯ ಉಳಿಸಿ, ಬೆಳೆಸುವ ಬಗ್ಗೆಮಾರ್ಗೋಪಾಯಗಳನ್ನು ವೆಂಕಟೇಶ ಮೂರ್ತಿ ಅವರು ಸಾಹಿತ್ಯ ಸಮ್ಮೇಳನದಲ್ಲಿ ನೀಡಬೇಕು’ ಎಂದು ಮನವಿ ಮಾಡಿದರು.

ಕವಯಿತ್ರಿಯರಾದ ಎಂ.ಆರ್.ಕಮಲಾ, ಶುಭಶ್ರೀ ಪ್ರಸಾದ್ ಮತ್ತಿತರರು ವೆಂಕಟೇಶಮೂರ್ತಿ ಅವರ ಕವಿತೆಗಳನ್ನು ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.